ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ: ರಾಜ್ಯ ಸರ್ಕಾರದ ವಿರುದ್ಧ BJP ಆರೋಪ

Published 31 ಮಾರ್ಚ್ 2024, 15:43 IST
Last Updated 31 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕೆಪಿಎಸ್‌ಸಿ ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ ನಡೆಸಿದೆ. ನೇಮಕಾತಿ ಪಟ್ಟಿಯೇ ನಾಪತ್ತೆ ಆಗಿರುವುದೇ ಇದಕ್ಕೆ ಸಾಕ್ಷಿ’ ಎಂದು ಬಿಜೆಪಿ ‘ಎಕ್ಸ್‌’ ಮೂಲಕ ಹರಿಹಾಯ್ದಿದೆ.

‘ಕಲೆಕ್ಷನ್‌, ಕಮಿಷನ್‌, ಟ್ರಾನ್ಸ್‌ಫರ್‌ ದಂಧೆ ನಡೆಸುತ್ತಿರುವ ಮಜಾವಾದಿ ಸಿದ್ದರಾಮಯ್ಯ ಸರ್ಕಾರ, ಇದೀಗ ಕೆಪಿಎಸ್‌ಸಿ ನೇಮಕಾತಿಯಲ್ಲೂ ಅಕ್ರಮ ನಡೆಸಿದೆ. ಈ ಅಕ್ರಮ ಬಯಲಿಗೆ ಬರಬಾರದು ಎಂದು ನೇಮಕಾತಿ ಪಟ್ಟಿಯನ್ನೇ ಕಳ್ಳತನ ಮಾಡಿ ನಾಪತ್ತೆ ಆಗಿದೆ ಎಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದೆ’ ಎಂದು ಬಿಜೆಪಿ ಹೇಳಿದೆ.

‘ಮಜಾವಾದಿ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರಿ ಕಡತಗಳು ಸುಟ್ಟು ಹೋಗುವುದು, ನಾಪತ್ತೆ ಆಗುವುದು ಸಾಮಾನ್ಯವಾಗಿದೆ. ಕಡತಗಳು ದೊರೆತರೇ ಮಾತ್ರ ಕಳ್ಳರು ಸಿಕ್ಕು ಬೀಳುತ್ತಾರೆ. ಕಡತವೇ ಇಲ್ಲ ಎಂದರೆ, ಕಳ್ಳರು ರಾಜಾರೋಷವಾಗಿ ಓಡಾಡಬಹುದು ಎನ್ನುವುದೇ ‘ಸ್ಲೀಪಿಂಗ್‌’ ಸರ್ಕಾರದ ಮೂಲಮಂತ್ರ’ ಎಂದು ಬಿಜೆಪಿ ಲೇವಡಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT