ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರಕ್ಕೆ ಹಣವಿಲ್ಲ, ಜಾಹೀರಾತಿಗೆ ಕೋಟಿ ಕೋಟಿ: ಬಿಜೆಪಿ ಕಿಡಿ

Published 24 ಡಿಸೆಂಬರ್ 2023, 10:15 IST
Last Updated 24 ಡಿಸೆಂಬರ್ 2023, 10:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರೈತರಿಗೆ ಬರ ಪರಿಹಾರ ನೀಡಲು, ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಬಳಿ ಹಣವಿಲ್ಲ. ಆದರೆ, ಜಾಹೀರಾತಿಗಾಗಿ ಖರ್ಚು ಮಾಡಲು ಕೋಟಿ ಕೋಟಿ ಹಣವಿದೆ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ‘ಬರದಿಂದ ಬಸವಳಿದ ರೈತರಿಗೆ ಪರಿಹಾರ ನೀಡಲು, ಶಾಸಕರಿಗೆ ಅನುದಾನ ಕೊಡಲು, ಸರ್ಕಾರ ಘೋಷಿಸಿರುವ ಗ್ಯಾರಂಟಿಗಳನ್ನು ಜಾರಿಗೊಳಿಸಲು, ಅಭಿವೃದ್ಧಿ ಮಾಡಲು ಕಾಂಗ್ರೆಸ್‌ ಸರ್ಕಾರದ ಬಳಿ ಹಣವಿಲ್ಲ. ಆದರೆ, ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆಯಲು ಮಾತ್ರ ಸಿಎಂ ಸಿದ್ದರಾಮಯ್ಯ ಅವರ ಬಳಿ ಕೋಟಿ ಕೋಟಿ ಹಣವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಆರು ತಿಂಗಳಲ್ಲಿ ಯಾವುದೇ ಸಾಧನೆ ಮಾಡದೆ ಇದ್ದರೂ ಕೂಡ ಜಾಹೀರಾತಿಗಾಗಿ ಬರೋಬ್ಬರಿ ₹18.50 ಕೋಟಿ ವ್ಯಯ ಮಾಡಲಾಗಿದೆ. ಶೋಕಿ, ಮೋಜು, ಮಸ್ತಿ ಮಾಡುತ್ತಾ ಇಲ್ಲದ ವಿವಾದಗಳನ್ನು ಮುನ್ನಲೆಗೆ ತಂದು ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ಕಾಂಗ್ರೆಸ್‌ ಸರ್ಕಾರ ಚಳಿ ಕಾಯಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT