ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರದ ಕಮಿಷನ್‌ ದಂಧೆ ಶೇ 80: ವಿಜಯೇಂದ್ರ

Published 9 ಫೆಬ್ರುವರಿ 2024, 19:30 IST
Last Updated 9 ಫೆಬ್ರುವರಿ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಕಮಿಷನ್‌ ದಂಧೆ ಶೇ 40 ಅಲ್ಲ, ಶೇ 80ರವರೆಗೂ ತಲುಪಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಶೇ 40 ಕಮಿಷನ್‌ ಆರೋಪಕ್ಕೆ ‘ಎಕ್ಸ್‌’ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಕಮಿಷನ್‌ ವಸೂಲಿಗೆ ನಿಯುಕ್ತಿ ಆಗಿರುವ ಅಧಿಕಾರಿಗಳ ವಿವರವನ್ನು ಧೈರ್ಯವಾಗಿ ಬಹಿರಂಗಪಡಿಸಲಿ. ಆಗ ಅದರ ಹಿಂದಿರುವ ‘ಮುಖ್ಯ’, ‘ಉಪಮುಖ್ಯ’ ಸೂತ್ರಧಾರಿಗಳ ನೈಜ ಮುಖವಾಡ ಕಳಚುತ್ತದೆ ಎಂದು ಹೇಳಿದ್ದಾರೆ.

‘ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ’ ಎಂಬ ಗಾದೆ ಮಾತು ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಬಿಜೆಪಿ ಸರ್ಕಾರದ ಕಾಲದಲ್ಲಿ ಇದೇ ಕೆಂಪಣ್ಣನವರು ಕಮಿಷನ್ ಆರೋಪ ಮಾಡಿ, ಗದ್ದಲ ಎಬ್ಬಿಸಿದ್ದರು. ಕಾಂಗ್ರೆಸ್ಸಿಗರು ಅದನ್ನು ಬಂಡವಾಳ ಮಾಡಿಕೊಂಡು ಸತ್ಯಹರಿಶ್ಚಂದ್ರರಂತೆ ಕೂಗಾಡಿದರು. ಆದರೆ, ಈಗ ಸಾಕ್ಷ್ಯ ಸಮೇತ ಶೇ 40ರಷ್ಟು ಕಮಿಷನ್‌ ಆರೋಪ ಮಾಡುತ್ತಿದ್ದಾರೆ. ಕಮಿಷನ್‌ ದಂಧೆ ಕಾಂಗ್ರೆಸ್‌ ಸರ್ಕಾರದಲ್ಲಿ ಎಗ್ಗಿಲ್ಲದೇ ಜಿಗಿಯುತ್ತಿದೆ ಎಂಬ ಆರೋಪ ಸತ್ಯವಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT