ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ಬಿ.ಕೆ ಹರಿಪ್ರಸಾದ್‌ ವಾಗ್ದಾಳಿ: ಬಿಜೆಪಿ ಟೀಕೆ

Published 12 ಸೆಪ್ಟೆಂಬರ್ 2023, 14:33 IST
Last Updated 12 ಸೆಪ್ಟೆಂಬರ್ 2023, 14:33 IST
ಅಕ್ಷರ ಗಾತ್ರ

ಬೆಂಗಳೂರು: ಕೇವಲ ಅಧಿಕಾರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿಕೊಂಡು ಕಾಂಗ್ರೆಸ್‌ಗೆ ವಲಸೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿ.ಕೆ ಹರಿಪ್ರಸಾದ್‌ ಮಾತನಾಡಿರುವುದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣಲದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಬಿಜೆಪಿ, ಅಹಿಂದ ಹೆಸರಲ್ಲಿ ರಾಜಕಾರಣ ಮಾಡಿದ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿದ್ದು ಸರಿಯೇ..?, ಸಮಾಜವಾದಿ ಎಂದು ಬಿಂಬಿಸಿಕೊಂಡ ಸಾಹೇಬರು ಕೋಟಿ ಬೆಲೆಯ ಹ್ಯೂಬ್ಲೆಟ್ ವಾಚ್ ಕಟ್ಟಿಕೊಂಡಿದ್ದು ಸರಿಯೇ..?, ಅಧಿಕಾರದ ದುರಾಸೆಗೆ ಬಿದ್ದು ಕೊನೆ ಚುನಾವಣೆ ಎನ್ನುತ್ತಲೇ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿದ್ದು ಸರಿಯೇ..?, ಸುದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದ ದಲಿತ ನಾಯಕ, ಜಿ. ಪರಮೇಶ್ವರ್ ಅವರಿಗೆ ಖೆಡ್ಡ ತೋಡಿದ್ದು ಸರಿಯೇ..?, ಕಾಲಿಗೆ ಚಕ್ರ ಕಟ್ಟಿಕೊಂಡು ನಾನೇ ಮುಖ್ಯಮಂತ್ರಿ ಎಂದು ಬೀಗುತ್ತಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಕೂಲಿ ಸಿಗದಂತೆ ಮಾಡಿದ್ದು ಸರಿಯೇ..?, ಪ್ರಮಾಣ ವಚನ ಸ್ವೀಕರಿಸಿ ನಾಪತ್ತೆ ಆಗಿದ್ದ ಸಚಿವರು ದಿಢೀರ್‌ ಪ್ರತ್ಯಕ್ಷವಾಗಿ ಹರಿಪ್ರಸಾದ್ ವಿರುದ್ಧವೇ ನಿಂತಿರುವುದು ಸರಿಯೇ..?, ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಬಿಜೆಪಿ ಕೇಳಿದೆ.

ಹರಿಪ್ರಸಾದ್ ಬೆನ್ನಿಗೆ ಡಿ.ಕೆ. ಶಿವಕುಮಾರ್ ನಿಂತಿದ್ದಾರೆ. ಹರಿಪ್ರಸಾದ್ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಇಳಿಸಲು ಪಣತೊಟ್ಟಿದ್ದಾರೆ‌. ರಾಜ್ಯದಲ್ಲಿ ಬರಗಾಲ, ಕ್ಷಾಮ ಆವರಿಸಿಕೊಂಡಿದೆ. ಆದರೆ ಕಾಂಗ್ರೆಸ್‌ ಸರ್ಕಾರಕ್ಕೆ ಬಣ ಬೇಗುದಿ ಶಮನವಾದರೆ ಸಾಕೆಂದು ಕೂತಿರುವುದು ಕನ್ನಡಿಗರ ದುರಂತ! ಎಂದು ವ್ಯಂಗ್ಯವಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT