ಬೆಂಗಳೂರು: ಕೋವಿಡ್ 19ನಿಂದಾಗಿ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ಅದರಲ್ಲೂ ಅಸಂಘಟಿತ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸಣ್ಣ ಕೈಗಾರಿಕೆಗಳ ಸ್ಥಗಿತದಿಂದ ಹನ್ನೊಂದು ಕೋಟಿ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಎಂಟು ಕೋಟಿ ವಲಸೆ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಅವರ ಕಷ್ಟಕ್ಕೆ ಸ್ಪಂದಿಸಲೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೂರಿದರು.

ಮಾಧ್ಯಮ ಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ರೈತರು ಕೂಡ ಸಾಕಷ್ಟು ಕಷ್ಟ ನಷ್ಟ ಎದುರಿಸುವಂತಾಗಿದೆ. ಅವರ ಸಂಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದರು.

ದೇಶದಲ್ಲಿ ರೈಲ್ವೆ ಇಲಾಖೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಪ್ರತಿದಿನ ಹದಿಮೂರು ಸಾವಿರ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿದ್ದವು. 2.3 ಕೋಟಿ ಜನ ನಿತ್ಯ ಪ್ರಯಾಣಿಸುತ್ತಿದ್ದರು. ಆದರೆ, 6 ಕೋಟಿ ವಲಸೆ ಕಾರ್ಮಿಕರನ್ನು ಪ್ಯಾಸೆಂಜರ್ ರೈಲಿನಲ್ಲಿ ಕಳುಹಿಸಿ ಕೊಡಬಹುದಿತ್ತು. ನಾಲ್ಕೈದು ದಿನಗಳಲ್ಲಿ ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆ ಮಾಡಬಹುದಾಗಿತ್ತು ಎಂದು ಖರ್ಗೆ ಅಭಿಪ್ರಾಯಪಟ್ಟರು.

ಲಾಕ್ಡೌನ್ಗೂ ಮೊದಲು ಕಾರ್ಮಿಕರನ್ನು ಅವರ ಸ್ಥಳಗಳಿಗೆ ತಲುಪಿಸಬಹುದಿತ್ತು. ಹಾಗೇ ಮಾಡಿದ್ದರೆ ಬೀದಿಯಲ್ಲಿ ಸಾವು, ರಸ್ತೆಯಲ್ಲಿ ಹೆರಿಗೆ ಆಗುವುದು ಕಾಣುತ್ತಿರಲಿಲ್ಲ. ರೈಲ್ವೆ ಹಳಿಗಳ ಮೇಲೆ ಮಲಗಿ ಸಾವು ಆಗುತ್ತಿರಲಿಲ್ಲ. ಅನ್ನ, ನೀರಿಲ್ಲದೆ ಜನ ಸಾಯುತ್ತಿರಲಿಲ್ಲ ಎಂದರು.

ಜನವರಿ 30ರಂದೇ ಕೊವಿಡ್ ಬಗ್ಗೆ ಗಮನಕ್ಕೆ ಬಂದಿತ್ತು. ಆದರೂ ಮೋದಿ ಅವರು ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಕರೆಸಿ ಸನ್ಮಾನ ಮಾಡಿದರು. ಕೇಂದ್ರ ಆಗಲೇ ಎಚ್ಚೆತ್ತುಕೊಂಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಕೊರೊನಾ ಹೆಚ್ಚಳಕ್ಕೆ ಟ್ರಂಪ್ ಕಾರ್ಯಕ್ರಮ ಕೂಡ ಕಾರಣ. ಈ ವಿಚಾರದಲ್ಲಿ ರಾಜಕಾರಣ ಮಾಡಲ್ಲ, ಮಾಡುವುದೂ ಇಲ್ಲ. ಆದರೆ, ಸುಮ್ಮನಿದ್ದರೆ ಜನರಿಗೆ ಗೊತ್ತಾಗುವುದೂ ಹೇಗೆ. ಹೀಗಾಗಿ ಅನಿವಾರ್ಯವಾಗಿ ಮಾತನಾಡಬೇಕಿದೆ ಎಂದರು.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಂಬೈ ಪರಿಸ್ಥಿತಿಯೇ ಬೇರೆ. ಬೇರೆ ರಾಜ್ಯಗಳ ಪರಿಸ್ಥಿತಿಯೇ ಬೇರೆ. ಮುಂಬೈಗೆ ಎಲ್ಲ ರಾಜ್ಯಗಳಿಂದ ಜನರು ಹೋಗುತ್ತಾರೆ. ಅಲ್ಲಿ ಕೊಳಚೆ ಪ್ರದೇಶದಲ್ಲಿ 30 ಲಕ್ಷ ಜನ ಇದ್ದಾರೆ. ಅದಕ್ಕೆ ಅಲ್ಲಿ ಹೆಚ್ಚು ಸೋಂಕು ಕಂಡುಬಂದಿದೆ. ಸೋಂಕು ತಡೆಯಲು ಸರ್ಕಾರ ಕಠಿಣ ಪ್ರಯತ್ನ ಮಾಡುತ್ತಿದೆ. 39 ಸಾವಿರ ಪ್ರಕರಣ ಮುಂಬೈನಲ್ಲಿವೆ. ಪುಣೆಯಲ್ಲಿ ರಾಜ್ಯದವರು 10 ಲಕ್ಷ ಜನ ಪುಣೆಯಲ್ಲಿದ್ದಾರೆ. ಅದಕ್ಕೆ ಹೆಚ್ಚಿನ ಸೋಂಕು ಕಂಡುಬಂದಿದೆ. ಸರ್ಕಾರ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಿದೆ ಎಂದರು.

ಇಲ್ಲಿಯವರೆಗೆ 260 ರೈಲುಗಳನ್ನು ಮಾತ್ರ ಓಡಿಸಲಾಗಿದೆ. ಈ ರೈಲುಗಳಲ್ಲಿ ಎಲ್ಲಾ ಕಾರ್ಮಿಕರು ತಮ್ಮ ತಮ್ಮ ಊರು ಸೇರಿಕೊಳ್ಳಲು ಸಾಧ್ಯವಾಗಿಲ್ಲ. ಇಂದಿಗೂ ಬೀದಿಯಲ್ಲೇ ಉಳಿಯುವಂತಾಗಿದೆ. ನಮ್ಮ ಪಕ್ಷ ಕಾರ್ಮಿಕರ ಸಹಾಯಕ್ಕೆ ನಿಂತಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ನಮ್ಮವರು ಮಾಸ್ಕ್, ಸ್ಯಾನಿಟೈಸರ್ ಎಲ್ಲವನ್ನೂ ನೀಡ್ತಿದ್ದಾರೆ. ರೈಲುಗಳ ಪ್ರಯಾಣಕ್ಕೂ ಅವಕಾಶ ಮಾಡಿಕೊಡ್ತಿದ್ದೇವೆ. 560 ಮಂದಿ ಲಾಕ್ ಡೌನ್ ನಿಂದ ಸಾವನ್ನಪ್ಪಿದ್ದಾರೆ

20 ಲಕ್ಷ ಕೋಟಿ ಹಣ ಘೋಷಿಸಿದ್ದಾರೆ. ಇದು ಕನ್ನಡಿಯೊಳಗಿನ ಗಂಟಿನಂತೆ. ಜಿಡಿಪಿಯ ಶೇ 10 ಅಲ್ಲ. ಬಜೆಟ್ ನ ಶೇ 1 ರಷ್ಟು ಹಣವನ್ನು ಘೋಷಿಸಿಲ್ಲ. ದಿನವೂ ಹೇಳಿದ್ದೇ ಹೇಳಿದ್ದು, ನಾವು ಕೇಳಿದ್ದೇ ಕೇಳಿದಗದು ಎಂದು ವ್ಯಂಗ್ಯವಾಡಿದರು.

ಪದಪ್ರಹಣ ಮುಂದೂಡಿಕೆ: ಮಾರ್ಚ್ 11 ರಂದು ಕೆಪಿಸಿಸಿ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ. ಅಂದಿನಿಂದಲೇ ನಾನು ಕೆಲಸ ಆರಂಭಿಸಿದ್ದೇನೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೋವಿಡ್ ನಿಂದ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ. ಆದರೂ ನಮ್ಮ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಪಕ್ಷವಾಗಿ ನಾವು ಸಮಸ್ಯೆಗೆ ಧ್ವನಿಯಾಗಿದ್ದೇವೆ. ಜನರ ಧ್ವನಿಯಾಗಿ ಸರ್ಕಾರಕ್ಕೆ ಸಂದೇಶ ಮುಟ್ಟಿಸಿದ್ದೇವೆ. ಸರ್ಕಾರದ ಕಣ್ತೆರೆಸುವ ಕೆಲಸ ಮಾಡಿದ್ದೇವೆ ಎಂದರು.

7800 ಕಡೆ ಒಂದೇ ಮಾತರಂ ಮೂಲಕ ಪದಗ್ರಹಣ ಮಾಡಲು ಉದ್ದೇಶಸಿದ್ದೆ. ಗ್ರಾ.ಪಂ. ವಾರ್ಡ್ ಮಟ್ಟದಲ್ಲಿ ಅಧಿಕಾರ ಸ್ವೀಕಾರ ನಡೆಯಬೇಕಿತ್ತು. ಸಂವಿಧಾನದ ಪ್ರಿಯಾಂಬಲ್ ಓದಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಿಗದಿ ಮಾಡಿದ್ದೆವು. ಈ ರೀತಿಯಾಗಿ ಕಾರ್ಯಕ್ರಮ ರೂಪಿಸಿದ್ದೆವು. ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ರೂಪಿಸಿದ್ದೇವೆ. ನಾವು ಸರ್ಕಾರ, ಕಮಿಷನರ್ ಒಪ್ಪಿಗೆಯನ್ನೂ ಕೇಳಿದ್ದೆವು. ಆದರೆ, ಇದೀಗ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿ ಹೊರಡಿಸಿದೆ. ಜೂನ್ 7 ರಂದು ಕಾರ್ಯಕ್ರಮ ಮಾಡಬೇಡಿ ಎಂದು ತಿಳಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ಮುಂದೂಡಿದ್ದೇವೆ. ನಾವು ಸಿದ್ಧತೆ ಮಾಡಿಕೊಂಡಿದ್ದು ಹಾಳಾಗಿದೆ. ಇದರ ಹಿಂದೆ ರಾಜಕೀಯ ಹುನ್ನಾರವಿದೆ ಎಂದೂ ಶಿವಕುಮಾರ್ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.