ಬೆಂಗಳೂರು: ಕ್ರೀಡೆ, ಎನ್ಸಿಸಿ, ರಕ್ಷಣೆ ಸೇರಿ ಇತರ ವಿಶೇಷ ವರ್ಗ ಹಾಗೂ ಸಿಇಟಿ ಅರ್ಜಿಯಲ್ಲಿ ವಿವಿಧ ಕೋಟಾಗಳನ್ನು ನಮೂದಿಸಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನಾ ಕಾರ್ಯ ಮೇ 5ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.

ಕೆಇಎ ವೆಬ್ಸೈಟ್ನಲ್ಲಿ ತಮಗೆ ಬೇಕಾದ ದಿನಾಂಕ ಮತ್ತು ಸಮಯವನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಲು ಒಂದೆರಡು ದಿನಗಳಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ಈ ಹಿಂದೆ ಸಿಇಟಿ ರ್ಯಾಂಕ್ ಬಂದ ನಂತರ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅದಕ್ಕೂ ಮೊದಲೇ ದಾಖಲೆ ಪರಿಶೀಲನೆ ಮಾಡಿಕೊಂಡು, ಫಲಿತಾಂಶ ನಂತರ ಆಪ್ಷನ್ ಎಂಟ್ರಿಗೆ ಅವಕಾಶ ನೀಡಲಾಗುತ್ತಿದೆ.

ವಿಶೇಷ ವರ್ಗ ಮತ್ತು ವಿವಿಧ ಕೋಟಾ ಅಡಿ ಸುಮಾರು 10 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರೂ ಹತ್ತು ದಿನ ಅವಕಾಶ ನೀಡಲಾಗಿದೆ. ಕ್ಲೇಮ್ಗೆ ಅನುಸಾರವಾಗಿ ಮೂಲ ದಾಖಲೆಗಳ ಸಮೇತ ಪರಿಶೀಲನೆಗೆ ಹಾಜರಾಗಬೇಕು. ಪರಿಶೀಲನೆ ನಂತರ ಅರ್ಜಿಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಂಡವರೂ ಪುನಃ ತಮ್ಮ ಅರ್ಜಿಯನ್ನು ಪರಿಶೀಲನೆಗೆ ಒಳಪಡಿಸಬೇಕು. ಇಲ್ಲದಿದ್ದರೆ, ತಮ್ಮ ತಿದ್ದುಪಡಿ ಊರ್ಜಿತವಾಗುವುದಿಲ್ಲ. ದಿನಕ್ಕೆ ಸಾವಿರ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.