ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಇಟಿ ದಾಖಲೆ: ತಪ್ಪು ಕಂಡರೆ ಕಚೇರಿಗೆ ಬರಲು ಸೂಚನೆ

Published 2 ಜುಲೈ 2024, 19:41 IST
Last Updated 2 ಜುಲೈ 2024, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಮಾಹಿತಿಯನ್ನು ಪ್ರಕಟಿಸಿದ್ದು, ತಪ್ಪು ಕಂಡುಬಂದಿದ್ದರೆ ಅಂತಹ ಅಭ್ಯರ್ಥಿಗಳು ಜುಲೈ 4ರಿಂದ 6ರ ಒಳಗೆ ಮಲ್ಲೇಶ್ವರದ ಕಚೇರಿಗೆ ಖುದ್ದು ಹಾಜರಾಗಬೇಕು ಎಂದು ಕೆಇಎ ಹೇಳಿದೆ.

ಒಂದು ಲಕ್ಷಕ್ಕಿಂತ ಒಳಗಿನ ರ್‍ಯಾಂಕಿಂಗ್‌ನ ವಿದ್ಯಾರ್ಥಿಗಳು ಜುಲೈ 4ರಂದು, 1.8 ಲಕ್ಷಕ್ಕಿಂತ ಒಳಗಿನನವರು ಜುಲೈ 5ರಂದು ಹಾಗೂ 1.8 ಲಕ್ಷಕ್ಕಿಂತ ಮೇಲ್ಪಟ್ಟ ರ್‍ಯಾಂಕ್ ಪಡೆದವರು ಜುಲೈ 6ರಂದು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ  ಹಾಜರಾಗಬೇಕು. ಸಿಇಟಿಗೆ ಸಲ್ಲಿಸಿದ್ದ ಅರ್ಜಿ ಪ್ರತಿ, ಪ್ರವೇಶ ಪತ್ರ, ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳು ಮತ್ತು ಎಲ್ಲಾ ಪ್ರಮಾಣ ಪತ್ರಗಳ ಎರಡು ಸೆಟ್‌ ಜೆರಾಕ್ಸ್‌ ಪ್ರತಿಗಳೊಂದಿಗೆ ಬರಬೇಕು ಎಂದು ಸೂಚಿಸಿದೆ.

ಎಲ್ಲಾ ಮಾಹಿತಿ ಸರಿ ಇರುವವರು ಕೆಇಎ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ವೆರಿಫಿಕೇಶನ್‌ ಸ್ಲಿಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT