ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಸಿಇಟಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ದೃಢೀಕರಣಕ್ಕಾಗಿ ‘ಆಧಾರ್’ ಬಳಸಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಅನುಮತಿ ನೀಡಿದೆ.

‘ಸೀಟ್ ಬ್ಲಾಕಿಂಗ್’ನಂತಹ ದಂಧೆಗೆ ಕಡಿವಾಣ ಹಾಕಲು ಈ ಬಾರಿ ಹಲವು ಸುಧಾರಣಾ ಕ್ರಮಕೈಗೊಂಡಿದ್ದ ಪ್ರಾಧಿಕಾರ, ಒಂದು ಮೊಬೈಲ್ ಸಂಖ್ಯೆಯಿಂದ ಒಟಿಪಿ ಬಳಸಿಕೊಂಡು ಒಂದು ಅರ್ಜಿ ಸಲ್ಲಿಸುವುದು ಹಾಗೂ ಮುಖಚಹರೆ ದಾಖಲಿಸುವುದನ್ನು ಕಡ್ಡಾಯಗೊಳಿಸಿತ್ತು. ಈಗ ಅಭ್ಯರ್ಥಿಗಳ ಆಧಾರ್ ದೃಢೀಕರಣಕ್ಕೂ ಅನುಮತಿ ಪಡೆದಿದೆ. ಅರ್ಜಿಯ ಜತೆಗೆ ಆಧಾರ್ ಸಲ್ಲಿಕೆ ಕಡ್ಡಾಯವಲ್ಲ. ಆದರೆ, ಮೊಬೈಲ್ ಸಂಖ್ಯೆ ಇರುವ ಆಧಾರ್ ಸಲ್ಲಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ಸೈಬರ್ ಕೇಂದ್ರಗಳ ಮೇಲೆ ವಿದ್ಯಾರ್ಥಿಗಳ ಅವಲಂಬನೆ ಕಡಿಮೆ ಮಾಡಲು ಗ್ರಾಮ ಒನ್ ಕೇಂದ್ರಗಳ ಕಂಪ್ಯೂಟರ್ ನಿರ್ವಾಹಕರಿಗೆ ತರಬೇತಿ ನೀಡಲಾಗಿದೆ. ಜ. 23ರಿಂದ 2025ನೇ ಸಾಲಿನ ಸಿಇಟಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇದುವರೆಗೆ 42,574 ಅರ್ಜಿಗಳು ಸಲ್ಲಿಕೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.