ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3: ಚಂದ್ರನ ಮೇಲಿನ ಮಣ್ಣಿನ ತಾಪಮಾನದ ಅವಲೋಕನ ಹಂಚಿಕೊಂಡ ಇಸ್ರೊ

Published 27 ಆಗಸ್ಟ್ 2023, 10:19 IST
Last Updated 27 ಆಗಸ್ಟ್ 2023, 10:19 IST
ಅಕ್ಷರ ಗಾತ್ರ

ಬೆಂಗಳೂರು:ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಲ್ಯಾಂಡರ್‌ನಿಂದ ಹೊರಬಂದ ರೋವರ್‌ ತನ್ನ ಕಾರ್ಯವನ್ನೂ ಆರಂಭಿಸಿದೆ. ಇದೀಗ ಮೊದಲ ಬಾರಿಗೆ ಚಂದ್ರನ ಮೇಲ್ಮೈನಲ್ಲಿನ ಮಣ್ಣಿನ ತಾಪಮಾನದ ಅವಲೋಕವನ್ನು ಮಾಡಲಾಗಿದ್ದು, ಇಸ್ರೊ ಈ ಬಗ್ಗೆ ತನ್ನ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದೆ. 

ಚೇಸ್ಟ್ ಅಥವಾ ‘ಚಂದ್ರಾಸ್ ಸರ್ಫೇಸ್ ಥರ್ಮೊ ಫಿಸಿಕಲ್ ಎಕ್ಸಪಿರಿಮೆಂಟ್ ಮೂಲಕ 10 ಸೆಂ.ಮೀ ಆಳದವರೆಗಿನ ತಾಪಮಾನದ ಮಾಹಿತಿ ಹಾಗೂ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುವ ಬಗ್ಗೆ ಗ್ರಾಫ್‌ವೊಂದನ್ನು ಹಂಚಿಕೊಂಡಿದೆ.

ಚೇಸ್ಟ್ ನಲ್ಲಿ ತಾಪಮಾನ ಅರಿಯುವ ಸಾಧನವನ್ನು ಅಳವಡಿಸಲಾಗಿದ್ದು, ಮೇಲ್ಮೈ ನಿಂದ 10 ಸೆಂ. ಮೀ ಕೆಳಗೆ ಹೋಗುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 10 ಪ್ರತ್ಯೇಕ ತಾಪಮಾನ ಸಂವೇದಕಗಳನ್ನು ಅಳವಡಿಕೆ ಮಾಡಲಾಗಿದೆ.

‘ಇಲ್ಲಿ ಹಂಚಿಕೊಂಡಿರುವ ಗ್ರಾಫ್‌ ಚಂದ್ರನ ಮೇಲ್ಮೈನಲ್ಲಿ ತಾಪಮಾನ ಬದಲಾವಣೆಯಾಗುವ ಬಗ್ಗೆ ಹೇಳಲಾಗಿದೆ. ಇದರ ಬಗೆಗಿನ ಸಂಪೂರ್ಣ ಅಧ್ಯಯನವನ್ನು ನಡೆಸಲಾಗುತ್ತಿದೆ’ ಎಂದು ಇಸ್ರೊ ಹೇಳಿದೆ.

ಅಹಮದಾಬಾದ್‌ನ ಭೌತಿಕ ಅನುಸಂಧಾನ ಪ್ರಯೋಗಾಲಯದ (PRL) ಸಹಯೋಗದೊಂದಿಗೆ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ (SPL), ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (VSSC)ದಲ್ಲಿ ಅಧ್ಯಯನವನ್ನು ನಡೆಸಲಾಗುತ್ತಿದೆ ಎಂದು ಇಸ್ರೊ ಮಾಹಿತಿ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT