ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ 2022’ ಪಟ್ಟಿಯಲ್ಲಿ ಮೈಸೂರು, ಹುಬ್ಬಳ್ಳಿ–ಧಾರವಾಡ

ಮಧ್ಯಪ್ರದೇಶ ಸ್ವಚ್ಛ ರಾಜ್ಯ
Last Updated 1 ಅಕ್ಟೋಬರ್ 2022, 19:24 IST
ಅಕ್ಷರ ಗಾತ್ರ

ನವದೆಹಲಿ: ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣೆ–2022 ರ್‍ಯಾಂಕಿಂಗ್‌ನಲ್ಲಿ ಕರ್ನಾಟಕ ಕಳಪೆ ಸಾಧನೆ ತೋರಿದ್ದು, ಮೊದಲ 100 ಸ್ವಚ್ಛ ನಗರಗಳ ಪಟ್ಟಿಯಲ್ಲಿ ರಾಜ್ಯದ ಎರಡು ನಗರಗಳು ಮಾತ್ರ ಸ್ಥಾನ ಪಡೆದಿವೆ.

ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು 8ನೇ ಸ್ಥಾನ ಪಡೆದುಕೊಂಡಿದೆ. ಹುಬ್ಬಳ್ಳಿ–ಧಾರವಾಡಕ್ಕೆ 82ನೇ ಶ್ರೇಯಾಂಕ ಲಭಿಸಿದೆ.

3ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ವಿಭಾಗದ 388 ಮಧ್ಯಮ ನಗರಗಳಲ್ಲಿ ಮೈಸೂರು ಮಹಾನಗರ ಪಾಲಿಕೆಯು 2ನೇ ಸ್ಥಾನ ಗಳಿಸಿದೆ. ಸ್ವಚ್ಛ ಮಧ್ಯಮ ನಗರ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು. ಅಚ್ಚರಿಯೆಂದರೆ, ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿ ರುವ ದೇಶದ 100 ಸ್ವಚ್ಛ ನಗರಗಳ ಪಟ್ಟಿಯಲ್ಲಿ ರಾಜ್ಯದ ಯಾವ ನಗರವೂ ಸ್ಥಾನ ಪಡೆದಿಲ್ಲ.

ಸ್ವಚ್ಛ ಕಂಟೋನ್ಮೆಂಟ್ ವರ್ಗದಲ್ಲಿ ಬೆಳಗಾವಿ ಕಂಟೋನ್ಮೆಂಟ್ 44ನೇ ಶ್ರೇಯಾಂಕ ಪಡೆದುಕೊಂಡಿದ್ದರೆ, ಶಿವಮೊಗ್ಗವನ್ನು ವೇಗವಾಗಿ ಬೆಳೆಯು ತ್ತಿರುವ ನಗರಗಳಲ್ಲಿ ಗುರುತಿಸಲಾಗಿದೆ. ಸುಸ್ಥಿರ ನಗರ ವಿಭಾಗದಲ್ಲಿ ಹೊಸದುರ್ಗವನ್ನು ಪರಿಗಣಿಸಲಾಗಿದೆ.

6 ಪ್ರಶಸ್ತಿ ಇಂದು ಪ್ರದಾನ: ಸ್ವಚ್ಛತೆಗೆ ಸಂಬಂಧಿಸಿದ 6 ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಭಾರತ ದಿವಸದ ಅಂಗವಾಗಿ ಭಾನುವಾರ ಪ್ರದಾನ ಮಾಡಲಿದ್ದಾರೆ. ಸ್ವಚ್ಛ ಸರ್ವೇಕ್ಷಣೆ ಗ್ರಾಮೀಣ–2022, ಸ್ವಚ್ಛತಾ ಹಿ ಸೇವಾ, ಜಲ್‌ ಜೀವನ ಮಿಶನ್‌ ಕಾರ್ಯನಿರ್ವಹಣೆ ಮೌಲ್ಯಮಾಪನ ಪ್ರಶಸ್ತಿಗಳನ್ನು ಮುರ್ಮು ಅವರು ಪ್ರದಾನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT