‘ಲಾಲ್‌ಬಾಗ್ ಜಾಗ ಬಿಟ್ಟುಕೊಡಲ್ಲ’
ಸುರಂಗಮಾರ್ಗಕ್ಕೆ ಲಾಲ್‌ಬಾಗ್‌ನ ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
‘ಈ ಯೋಜನೆಯ ಡಿಪಿಆರ್ ಸರಿ ಇಲ್ಲ ಎಂದು ನಗರಾಭಿವೃದ್ಧಿ ಇಲಾಖೆ ತಜ್ಞರ ಸಮಿತಿಯೇ ಹೇಳಿದೆ. ₹20 ಸಾವಿರ ಕೋಟಿಯ ಈ ಯೋಜನೆ ಕೇವಲ ಶೇ 10ರಷ್ಟು ಕಾರು ಮಾಲೀಕರಿಗೆ ಪ್ರಯೋಜನಕಾರಿ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.