ಪಿಣರಾಯಿ ಟ್ವೀಟ್
'ಬೆಂಗಳೂರಿನ ಫಕೀರ್ ಕಾಲೊನಿ ಹಾಗೂ ವಾಸೀಂ ಲೇಔಟ್ ಅನ್ನು ನೆಲಸಮಗೊಳಿಸುವ ಮೂಲಕ, ಹಲವು ವರ್ಷಗಳಿಂದ ಅಲ್ಲಿ ನೆಲೆಸಿದ್ದ ಮುಸ್ಲಿಂ ಕುಟುಂಬಗಳ ನೆಲೆಯನ್ನು ನಾಶ ಮಾಡಲಾಗಿದೆ. ಇದು ಬುಲ್ಡೋಜರ್ ಕಾನೂನು ಸಾಮಾನ್ಯವಾಗಿ ಜಾರಿಯಾಗುತ್ತಿರುವುದನ್ನು ಎತ್ತಿತೋರಿಸುತ್ತದೆ. ದುಃಖಕರ ಸಂಗತಿಯೆಂದರೆ, ಸಂಘ ಪರಿವಾರವು ನಡೆಸುತ್ತಿರುವ ಅಲ್ಪಸಂಖ್ಯಾತರ ವಿರೋಧಿ ರಾಜಕೀಯವು ಇದೀಗ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಕಾರ್ಯಗತಗೊಳ್ಳುತ್ತಿದೆ. ಭಯ ಹಾಗೂ ಕ್ರೌರ್ಯದ ಬಲದೊಂದಿಗೆ ಆಡಳಿತ ನಡೆಯುವಾಗ ಸಾಂವಿಧಾನಿಕ ಮೌಲ್ಯಗಳು ಮತ್ತು ವ್ಯಕ್ತಿ ಘನತೆಯು ಮೊದಲಿಗೆ ಬಲಿಪಶುವಾಗುತ್ತವೆ. ಇಂತಹ ಕಪಟ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಎಲ್ಲ ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು' ಎಂದು ಪಿಣರಾಯಿ ಟ್ವೀಟ್ ಮಾಡಿದ್ದಾರೆ.