ಕೊಲೆ, ಗಲಭೆ ಪ್ರಕರಣ
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023ರಲ್ಲಿ 11 ಕೊಲೆ ಪ್ರಕರಣಗಳು ದಾಖಲಾಗಿತ್ತು. ಆ ಪೈಕಿ, 10 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಒಂದು ಪ್ರಕರಣ ತನಿಖೆಯ ಹಂತದಲ್ಲಿದೆ. 2024ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು 12ಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. 2025ರಲ್ಲಿ ಜುಲೈವರೆಗೆ ಆರು ಪ್ರಕರಣಗಳು ದಾಖಲಾಗಿದ್ದು, 2 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
2023ರಲ್ಲಿ 50 ಗಲಭೆ ಪ್ರಕರಣಗಳಲ್ಲಿ 24 ಪ್ರಕರಣಗಳಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2024ರಲ್ಲಿ 31ರಲ್ಲಿ 24 ಪ್ರಕರಣಗಳಿಗೆ ಹಾಗೂ 2025ರ ಜುಲೈವರೆಗೂ 16 ಗಲಭೆ ಪ್ರಕರಣಗಳಲ್ಲಿ 2 ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2023ರಲ್ಲಿ 12, 2024ರಲ್ಲಿ 6, 2025ರ ಜುಲೈ ವರೆಗೂ 3 ಕೊಲೆ ಪ್ರಕರಣಗಳು ವರದಿಯಾಗಿವೆ’ ಎಂದು ಪರಮೇಶ್ವರ ತಿಳಿಸಿದರು.