‘ಗಾಂಧಿ ಭಾರತ’ ಸಮಾವೇಶದ ನಿಮಿತ್ತ ಬೆಳಗಾವಿ ನಗರ ವಿದ್ಯುದ್ದೀಪಗಳಿಂದ ಜಗಮಗಿಸುತ್ತಿದ್ದರೆ, ಇಲ್ಲಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ಹುದಲಿ ಗ್ರಾಮವನ್ನು, ಅಲ್ಲಿನ ಗಾಂಧಿ ಆಶ್ರಮವನ್ನೂ ಸರ್ಕಾರ ಸಂಪೂರ್ಣ ಕಡೆಗಣಿಸಿದೆ. 1937ರಲ್ಲಿ ಮಹಾತ್ಮಗಾಂಧಿ ಅವರು ಇದೇ ಊರಿನಲ್ಲಿ ಏಳು ದಿನ ತಂಗಿದ್ದು, ಸ್ವಾತಂತ್ರ್ಯ ಆಂದೋಲನದ ಶಿಬಿರ ನಡೆಸಿದ್ದರು. ಗುಜರಾತಿನ ಸಾಬರಮತಿ ಆಶ್ರಮದಷ್ಟೇ ಮಹತ್ವಪೂರ್ಣವಾದ ಆಶ್ರಮ ಇದು. ಗ್ರಾಮೋದಯಕ್ಕೆ ನಾಂದಿಯಾದ ಚರಕಗಳು ಈಗ ದುಸ್ಥಿತಿಯಲ್ಲಿವೆ. ಸಂಘದ ಮೂಲಕ ಕಚ್ಚಾ ಹತ್ತಿ ಖರೀದಿಸಿ, ನೂಲು ಮಾತ್ರ ತಯಾರಿಸುತ್ತಿವೆ. ಹುದಲಿಯಲ್ಲಿ ಈಗಲೂ 100 ಮಹಿಳೆಯರು ಚರಕವನ್ನೇ ಅವಲಂಬಿಸಿದ್ದಾರೆ. ಎಲ್ಲ ಗ್ರಾಮಗಳೂ ಸೇರಿ 1,000ಕ್ಕೂ ಹೆಚ್ಚು ಕುಟುಂಬಗಳೂ ಇದನ್ನೇ ನಂಬಿವೆ. ಇವರಿಗೆ ಸಂಬಳವಿಲ್ಲ. ನೂಲಿನ ಉಂಡಿಗಳ ಮೇಲೆ ಕೂಲಿ ಸಿಗುತ್ತದೆ. ಇಳಿವಯಸ್ಸಿನಲ್ಲಿ ಬೇರೆ ಕೆಲಸಕ್ಕೆ ಹೋಗಬೇಕೆಂದರೂ, ಇಲ್ಲಿನ ಮಹಿಳೆಯರಿಗೆ ಅವಕಾಶ ಸಿಗುತ್ತಿಲ್ಲ. ಹುದಲಿಯ ಗ್ರೌಂಡ್ ರಿಪೋರ್ಟ್ ಈ ವಿಡಿಯೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.