ಚಾಮರಾಜನಗರ: ಕ್ರಾಂಗ್ರೆಸ್ನವರು ಜಾತಿ ಗಣತಿ ವಿಚಾರವನ್ನು ಜೀವಂತವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಶನಿವಾರ ದೂರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ವರದಿ ಮಂಡನೆ ಮಾಡಲಾಗಿತ್ತು. ಅವರ ಸರ್ಕಾರವೇ ಅದನ್ನು ಬಹಿರಂಗ ಪಡಿಸಿಲ್ಲ. ಹಾಗಿದ್ದರೂ, ಅಂದಿನಿಂದಲೂ ಕಾಂಗ್ರೆಸ್ನವರು ಇದರ ಬಗ್ಗೆ ಮಾತನಾಡುತ್ತಲೇ ಇದ್ದಾರೆ’ ಎಂದು ದೂರಿದರು.

‘ಆ ವಿಚಾರವನ್ನು ಜೀವಂತವಾಗಿರಿಸಿಕೊಂಡು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಚುನಾವಣೆಯ ನಂತರ ಇದು ಯಾವುದೂ ಚರ್ಚೆಗೆ ಬರುವುದಿಲ್ಲ’ ಎಂದರು.

ಶಾಮನೂರು ಮಾತು ಸತ್ಯ: ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸ್ಥಾನಮಾನ ಸಿಕ್ಕಿಲ್ಲ ಎಂಬ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಶಿವಶಂಕರಪ್ಪ ಅವರು ನೊಂದುಕೊಂಡು ಆ ಮಾತು ಹೇಳಿದ್ದಾರೆ. ಅದು ಸತ್ಯ. ಅವರ ಮಾತಿಗೆ ನಾನು ಧ್ವನಿಗೂಡಿಸುತ್ತೇನೆ’ ಎಂದರು.

‘ವಿಧಾನಸೌಧದಲ್ಲಿ ಹೋಗಿ ನೋಡಿದರೆ ಯಾವ ಯಾವ ಅಧಿಕಾರಿಗಳು ಎಲ್ಲಿದ್ದಾರೆ? ಯಾರಿಗೆ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ ಎಂಬುದು ಗೊತ್ತಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತರ ಮತ ಗಳಿಸುವುದಕ್ಕಾಗಿ, ಬಿಜೆಪಿ ಲಿಂಗಾಯತ ವಿರೋಧಿ ಎಂದು ಕಾಂಗ್ರೆಸ್ ಬಿಂಬಿಸಿತ್ತು. ಅದರ ಲಾಭ ಪಡೆದುಕೊಂಡು ಗೆದ್ದಿತ್ತು’ ಎಂದು ಕಿಡಿ ಕಾರಿದರು.

ಹಿಂದೂಗಳಿಗೆ ರಕ್ಷಣೆ ಇಲ್ಲ: ಶಿವಮೊಗ್ಗ ಗಲಾಟೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಹಿಂದೂ ಪರ ಕೆಲಸ ಮಾಡುವ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದೆ. ಹಿಂದೂಗಳನ್ನು ಓಲೈಸಲು ಆಗುವುದಿಲ್ಲ ಎಂದು ಮೂಲಭೂತವಾದಿಗಳನ್ನು ಸರ್ಕಾರ ಓಲೈಸುತ್ತಿದೆ’ ಎಂದು ದೂರಿದರು.

‘ಶಿವಮೊಗ್ಗ ಪ್ರಕರಣವನ್ನು ನಿವೃತ್ತ ಮುಖ್ಯ ನ್ಯಾಯಮೂರ್ತಿಯವರಿಂದ ತನಿಖೆ ನಡೆಸಲಿ. ಗಲಭೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಿ. ಈ ಗಲಭೆಗೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ನೇರ ಹೊಣೆ. ಕೋಮು ಗಲಭೆ ಶಿವಮೊಗ್ಗಕ್ಕೆ ಸೀಮಿತವಾಗಿಲ್ಲ. ಬೇರೆ ಬೇರೆ ಕಡೆಯೂ ನಡೆಯುತ್ತಿದೆ’ ಎಂದರು.

ಟಿಕೆಟ್ ಕೊಟ್ಟರೆ ನೋಡೋಣ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಕೇಳಿದ್ದಕ್ಕೆ, ‘ಚುನಾವಣೆ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ. ಹೈಕಮಾಂಡ್ ಟಿಕೆಟ್ ಕೊಟ್ಟರೆ ನೋಡೋಣ. ನಾನು ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧೆ ಸಂಬಂಧ ಯಾವುದೇ ಸರ್ವೆ ನಡೆಸಿಲ್ಲ. ನಾವೆಲ್ಲ ಎಲ್ಲ ಕಡೆ ಓಡಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ’ ಎಂದು ಪ್ರತಿಕ್ರಿಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.