ಒಂದೇ ಒಂದು ರಸ್ತೆ ಗುಂಡಿ ಮುಚ್ಚಲು ದುಡ್ಡಿಲ್ಲ, ಪಾಲಿಕೆ ಶಾಲೆಗಳ ಶಿಕ್ಷಕರಿಗೆ 6 ತಿಂಗಳಿಂದ ವೇತನ ಕೊಟ್ಟಿಲ್ಲ, ಬೆಂಗಳೂರಿನ ಜನ ಕಟ್ಟುತ್ತಿರುವ ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣ ಎಲ್ಲಿ?
-ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಗುತ್ತಿಗೆ ಕೆಲಸ ಮಾಡಿ ಬಂಡವಾಳ ಹಾಕಿದವರು ಬೀದಿಗೆ ಬಂದಿದ್ದಾರೆ. ಸಾಲ ಸೋಲ ಮಾಡಿ ಕೆಲಸ ಮಾಡಿದ ಸಣ್ಣ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.