ಕನ್ನಡ ತಂತ್ರಾಂಶ: ಕೆಎಂಎಫ್‌ಗೆ ಸೂಚನೆ
‘ಕೆಎಂಎಫ್‌ನಲ್ಲಿರುವ ತಂತ್ರಾಂಶ ಹಾಲು ಉತ್ಪಾದಕರಿಗೆ ಅನುಕೂಲಕರ ಆಗಿಲ್ಲ. ಹೀಗಾಗಿ ಅನುಕೂಲಕರವಾದ ಕನ್ನಡ ತಂತ್ರಾಂಶ ಅಳವಡಿಸಬೇಕು’ ಎಂದು ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಲದ ಎಸ್. ಶಿವನಾಗಪ್ಪ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ತಕ್ಷಣ ಕೆಎಂಎಫ್ ಎಂಡಿ ಅವರಿಗೆ ಕರೆ ಮಾಡಿ ಹಾಲು ಉತ್ಪಾದಕರ ಸ್ನೇಹಿ ತಂತ್ರಾಂಶ ಅಳವಡಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.