ಮಡಿಕೇರಿ: ಕೊಡಗಿನ ಡಾ.ಅಫ್ರೀನ್ ಅಮೀರ್ ಅವರು ಲಂಡನ್ನಲ್ಲಿ ಕೋವಿಡ್ 19ಗೆ ಕಂಡುಹಿಡಿಯುತ್ತಿರುವ ಔಷಧಿಯ ಸಂಶೋಧನಾ ತಂಡದಲ್ಲಿದ್ದಾರೆ. ಕೊಡಗು ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ಅವರ ಅಣ್ಣನ ಮಗಳು ಅಫ್ರೀನ್ ಅಮೀರ್.

‘ಡೆಕ್ಸಾಮೆಥಸೊನ್’ ಎಂಬ ಔಷಧಿಯ ಸಂಶೋಧನಾ ತಂಡದಲ್ಲಿದ್ದಾರೆ. ಮಂಗಳೂರಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮುಗಿಸಿದ್ದ ಇವರು. ಉನ್ನತ ವ್ಯಾಸಂಗವನ್ನು ಲಂಡನ್ನಲ್ಲೇ ಪೂರ್ಣಗೊಳಿಸಿ ಅಲ್ಲಿಯೇ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಅಫ್ರೀನ್ ಅವರ ತಂದೆ ಎಸ್.ಐ.ಅಮೀರುದ್ದೀನ್ ದುಬೈನಲ್ಲಿ ನೆಲೆಸಿದ್ದಾರೆ. ಪತಿ ಮುಶೀರ್ ಸಹ ಲಂಡನ್ನಲ್ಲಿ ವೈದ್ಯ.

‘ಡೆಕ್ಸಾಮೆಥಸೊನ್’ ಎಂಬ ಔಷಧಿ ಕೊರೊನಾ ವೈರಸ್ ಸೋಂಕಿನೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರಿಗೆ ನೀಡಲ್ಪಡುವ ಸ್ಟಿರಾಯ್ಡ್ ಔಷಧಿಯಾಗಿದೆ. ಈ ಔಷಧಿಯ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗಿದೆ. ಸೋಂಕಿನ ಕಾರಣದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳ ಸಾವಿನ ಪ್ರಮಾಣವನ್ನು ಈ ಔಷಧಿಯ ಬಳಕೆಯಿಂದ ಮೂರನೇ ಒಂದರಷ್ಟು ತಗ್ಗಿಸಬಹುದು ಎಂದು ಸಂಶೋಧಕರು ಈಚೆಗೆ ತಿಳಿಸಿದ್ದರು. ಶೀಘ್ರವೇ ವರದಿ ಪ್ರಕಟಿಸುವುದಾಗಿ ತಿಳಿಸಿದ್ದರು.

‘ಮಡಿಕೇರಿಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದ ಅಫ್ರೀನ್, ಆ ಸಾಲಿನಲ್ಲಿ ಜಿಲ್ಲೆಗೆ ದ್ವಿತೀಯ ರ್ಯಾಂಕ್ ಪಡೆದಿದ್ದಳು. ಕೋವಿಡ್ 19ಗೆ ನಡೆಸುತ್ತಿರುವ ಔಷಧಿ ಸಂಶೋಧನೆಯ ತಂಡ ಏಳು ಸದಸ್ಯರಲ್ಲಿ ಈಕೆಯೂ ಒಬ್ಬಳು. ಈಕೆಗೆ ವೈದ್ಯಕೀಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಅತ್ಯಂತ ಆಸಕ್ತಿಯಿತ್ತು’ ಎಂದು ಮುನೀರ್ ಅಹಮದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.