ಬೆಂಗಳೂರು:ರಾಜ್ಯದಲ್ಲಿಶನಿವಾರ 4,537 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 60 ಸಾವಿರದತ್ತ (59,652) ದಾಪುಗಾಲಿಟ್ಟಿದೆ. ಕೋವಿಡ್‍ನಿಂದ ಮತ್ತೆ 93 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ಇದರಿಂದ ಮೃತರ ಸಂಖ್ಯೆ 1,240ಕ್ಕೆ ಏರಿದೆ.

ಒಂದೇ ದಿನ 9,315 ಮಂದಿಗೆ ಆ್ಯಂಟಿಜೆನ್ ಪರೀಕ್ಷೆ ಸೇರಿದಂತೆ 34,819 ಮಂದಿಯ ಗಂಟಲದ್ರವದ ಪರೀಕ್ಷೆ ಮಾಡಲಾಗಿದೆ. ಕೇವಲ 48 ಗಂಟೆಗಳಲ್ಲಿ 8,230 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಇದೇ ಅವಧಿಯಲ್ಲಿ 208 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ 250 ಸೇರಿದಂತೆ ರಾಜ್ಯದಲ್ಲಿ 1,018 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಹೀಗಾಗಿ, ಗುಣಮುಖರಾದವರ ಸಂಖ್ಯೆ 21,775ಕ್ಕೆ ಏರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಹೆಚ್ಚು?
ಬೆಂಗಳೂರು ನಗರ (2125), ದಕ್ಷಿಣ ಕನ್ನಡ (509), ಧಾರವಾಡ (186), ವಿಜಯಪುರ (176), ಬಳ್ಳಾರಿ (155), ಬೆಳಗಾವಿ (137), ಉತ್ತರ ಕನ್ನಡ (116), ಶಿವಮೊಗ್ಗ (114), ಉಡುಪಿ (109), ಚಿಕ್ಕಬಳ್ಳಾಪುರ (107), ಮೈಸೂರು (101) ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.