ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಅಬಕಾರಿ ಸುಂಕ ಶೇ 17 ಹೆಚ್ಚಳ: ಮದ್ಯ ದುಬಾರಿ

Last Updated 6 ಮೇ 2020, 6:26 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕದಲ್ಲಿಯೂ ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡುವ ನಿರ್ಧಾರವನ್ನುಸರ್ಕಾರ ಕೈಗೊಂಡಿದೆ.

ಮದ್ಯದ ಮೇಲೆ ಹೆಚ್ಚುವರಿಯಾಗಿ ಶೇ 11ರಷ್ಟುಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಬಜೆಟ್‌ನಲ್ಲಿಅಬಕಾರಿ ಸುಂಕ ಶೇ 6ರಷ್ಟುಹೆಚ್ಚಿಸಲಾಗಿತ್ತು. ಇದರಿಂದಒಟ್ಟು ಸುಂಕಶೇ 17ರಷ್ಟು ಹೆಚ್ಚಳವಾದಂತಾಗಲಿದೆ.

ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಜಾರಿಯಾಗುವ ಜತೆಗೆ ಸಡಿಲಿಕೆಯ ಭಾಗವಾಗಿ ಸೋಮವಾರದಿಂದ ಮದ್ಯ ಮಾರಾಟ ಮಳಿಗೆಗಳು ತೆರೆದಿವೆ. ಮದ್ಯದ ದರ ಶೇ 25ರಷ್ಟು ಏರಿಕೆ ಮಾಡಿದ್ದ ಆಂಧ್ರ ಪ್ರದೇಶ ಸರ್ಕಾರ, ಮಂಗಳವಾರ ಮತ್ತೆ ಶೇ 50ರಷ್ಟು ದರ ಹೆಚ್ಚಳ ಪ್ರಕಟಿಸಿದೆ.ಈ ಮೂಲಕ ಆಂಧ್ರ ಪ್ರದೇಶದಲ್ಲಿಮದ್ಯದ ಬೆಲೆ ಶೇ 75ರಷ್ಟು ಹೆಚ್ಚಳವಾದಂತಾಗಿದೆ.

ದೇಶದಾದ್ಯಂತ ಹಲವು ರಾಜ್ಯ ಸರ್ಕಾರಗಳು ಮದ್ಯದ ಮಾರಾಟದ ಮೇಲೆ ತೆರಿಗೆ ಹೆಚ್ಚಳ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿವೆ.

ದೆಹಲಿ ಸರ್ಕಾರ, ಮದ್ಯ ಖರೀದಿಗೆ ಸಾಲುಗಟ್ಟಿರುವಜನಸಂದಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶೇಷ ಕೊರೊನಾ ಶುಲ್ಕದ ಹೆಸರಿನಲ್ಲಿ ಶೇ 70ರಷ್ಟು ತೆರಿಗೆ ವಿಧಿಸಿರುವ ನಿರ್ಧಾರ ಪ್ರಕಟಿಸಿತು.ಮದ್ಯಗಳ ಗರಿಷ್ಠ ಮಾರಾಟ ಬೆಲೆಯ ಮೇಲೆ ಶೇ 70ರಷ್ಟು ತೆರಿಗೆ ವಿಧಿಸಿರುವುದರಿಂದ ರಿಟೇಲ್‌ ಮದ್ಯದ ದರ ಭಾರೀ ಏರಿಕೆಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT