ಬೆಂಗಳೂರು: ‘ಪರಿಶಿಷ್ಟ ಜಾತಿಗೆ ಸೇರಿದ ಕೆನೆಪದರದ ವರ್ಗ ಮೀಸಲಾತಿ ಸೌಲಭ್ಯ ಬಿಟ್ಟುಕೊಡಬೇಕೆಂಬ ಸುಪ್ರೀಂ ಕೋರ್ಟ್ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ಅಭಿಪ್ರಾಯ ಅತ್ಯಂತ ಆಶ್ಚರ್ಯಕರವಾಗಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಮೀಸಲಾತಿ ಎಂಬುದು ಆರ್ಥಿಕ ಕಾರ್ಯಕ್ರಮವಲ್ಲ, ಬಡತನ ನಿರ್ಮೂಲನ ಕಾರ್ಯಕ್ರಮವೂ ಅಲ್ಲ. ಅದು ಸಮಾನತೆಯ, ಸಾಮಾಜಿಕ ನ್ಯಾಯದ ಶಾಸನ’ ಎಂದು ಹೇಳಿದ್ದಾರೆ.

ಅವರ ಬರಹದ ಯಥಾವತ್ ರೂಪ ಇಲ್ಲಿದೆ:

’ಒಮ್ಮೆ ಮೀಸಲಾತಿ ಲಾಭ ಪಡೆದ ಕುಟುಂಬಗಳು ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಮೀಸಲಾತಿ ಬಿಟ್ಟುಕೊಡಬೇಕು, ಇಲ್ಲದಿದ್ದಲ್ಲಿ ಅದು ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ’ ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆಯವರು ಮಾತನಾಡಿದಂತೆ ವರದಿಯಾಗಿದೆ.

ಅದೇ ರೀತಿ ಸುಪ್ರೀಂ ಕೋರ್ಟಿನ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರು ಮಾತನಾಡುತ್ತಾ, ‘ಕೆನೆಪದರ ಮೀಸಲಾತಿ ಸೌಲಭ್ಯವನ್ನು ಪರಿಶಿಷ್ಟ ಜಾತಿಯವರಿಗೂ ನೀಡುವುದು ಸೂಕ್ತ. ರಾಜಕೀಯ ಮುತ್ಸದ್ದಿಗಳು, ಯುವಜನರು ಕೆನೆಪದರ ಮೀಸಲಾತಿ ಬಗ್ಗೆ ಏಕೆ ದ್ವನಿಯೆತ್ತಲಿಲ್ಲ’ ಎಂದು ಪ್ರಶ್ನೆ ಮಾಡಿರುವ ಬಗ್ಗೆಯೂ ವರದಿಯಾಗಿದೆ.

ಈ ವರದಿಯನ್ನು ಪ್ರಮುಖ ಪತ್ರಿಕೆ 'ಪ್ರಜಾವಾಣಿ' ವರದಿ ಮಾಡಿರುವುದರ ಆಧಾರದ ಮೇಲೆ ನನ್ನ ಈ ಟಿಪ್ಪಣಿ ಅಥವಾ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ.

ಇದು ಬಿಜೆಪಿ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬ ಬರೆದ ಪುಸ್ತಕ ಬಿಡುಗಡೆಯ ಕಾರ್ಯಕ್ರಮ. ‘ನನ್ನ ಜನ ಅನಾಥ' ಎಂಬ ಟೈಟಲನ್ನು ನೋಡಿದ ಗೆಳೆಯನೊಬ್ಬ 'ನನ್ನ ಜನ' ಎನ್ನುವುದು ಬಹುವಚನ ಅಲ್ಲವೇ, ಇಲ್ಲಿ 'ನನ್ನ ಜನ ಅನಾಥರು' ಎಂದಿರಬೇಕಿತ್ತಲ್ಲ, ಪುಸ್ತಕದ ಟೈಟಲ್ನಲ್ಲೇ ಏಕವಚನ, ಬಹುವಚನದ ವ್ಯತ್ಯಾಸ ತಿಳಿಯದವರೂ ಕೂಡ ಪುಸ್ತಕ ಬರೆಯುತ್ತಾರೆ..! ಪರವಾಗಿಲ್ಲ" ಎಂದು ಊರ ತುಂಬ ಅಂಟಿಸಿದ್ದ ಪೋಸ್ಟರುಗಳನ್ನು ನೋಡಿ ನಕ್ಕಿದ್ದೆ.

ಇಂತಹ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶ್ರೀಧರ ರಾವ್ ಹಾಗೂ ಸಂಜಯ್ ಪಾಸ್ವಾನ್ ಎಂಬ ಬಿಜೆಪಿ ವ್ಯಕ್ತಿ ಹೋಗಿದ್ದರು, ಆದರೆ ಕಮ್ಯುನಿಸ್ಟ್ ಹಿನ್ನೆಲೆಯ ನ್ಯಾಯಮೂರ್ತಿ ವಿ.ಗೋಪಾಲಗೌಡರು ಹೋಗಿದ್ದು ಆಶ್ಚರ್ಯ!

ಈ ಇಬ್ಬರೂ ನ್ಯಾಯಮೂರ್ತಿಗಳು ಸಂವಿಧಾನದ ಮೇಲೆಯೇ ಕೆಲಸ ಮಾಡಿದವರು. ಸಂವಿಧಾನದ ಆಧಾರದ ಮೇಲೆ ಅನೇಕ ಪ್ರಕರಣಗಳನ್ನು ತೀರ್ಮಾನಿಸಿರುವವರು. ಅನೇಕ ತೀರ್ಪುಗಳನ್ನೂ ಬರೆದಿರುವವರು. ಸಂವಿಧಾನದ ಬಗ್ಗೆ ಅಪಾರ ಜ್ಞಾನವುಳ್ಳವರು ಆಗಿದ್ದು, 'ಪರಿಶಿಷ್ಟ ಜಾತಿಗಳಿಗೂ ಕೆನೆಪದರ ನೀತಿಯನ್ನು ಅಳವಡಿಸಬೇಕೆಂದೂ ಇಲ್ಲದಿದ್ದಲ್ಲಿ ಸಂವಿಧಾನಕ್ಕೆ ಅಪಚಾರವಾಗುತ್ತದೆ' ಎಂದು ಹೇಳಿದ್ದಾರೆ! ಇವರನ್ನು ಪ್ರಶ್ನಿಸುವಷ್ಟು ಜ್ಞಾನ ಅಥವಾ ಧೈರ್ಯ ನನಗಿಲ್ಲ! ಆದ್ದರಿಂದ ಸುಪ್ರೀಂ ಕೋರ್ಟ್ನ ಒಂಬತ್ತು ಮಂದಿ ನ್ಯಾಯಮೂರ್ತಿಗಳು ನೀಡಿರುವ ತೀರ್ಪನ್ನು ಇವರಿಗೆ ನೆನಪಿಸುತಿದ್ದೇನೆ...

ಕೆನೆಪದರ ಅಥವಾ creamy layer ಗೆ ಸಂಭಂದ ಪಟ್ಟಂತೆ ಈ ದೇಶದ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ನೀಡಿರುವ ಇಂದ್ರಾ ಸಾಹ್ನಿ vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಈ ಭಾಗವನ್ನು ನೋಡಬೇಕೆಂದು ನಮ್ರವಾಗಿ ಅವರ ಗಮನ ಸೆಳೆಯುತಿದ್ದೇನೆ.

"Lowlier the occupation, lowlier the social standing for the class is the graded hierarchy. In rural India, occupation and caste nexus is true even today. A few members may have gone to cities or even abroad but when they return they too, barring a few exceptions go into the same fold again. It does not matter if he has earned money. He may not follow the particular occupation but still the label remains. His identity is not changed for the purpose of marriage, death and other social functions. It is the social class that is still relevant." ಎಂದು ಹೇಳುತ್ತಾ ಪರಿಶಿಷ್ಟರಿಗೆ ಕೆನೆಪದರ ನೀತಿಯನ್ನು ಅಳವಡಿಸಬಾರದೆಂದು ಸ್ಪಷ್ಟವಾಗಿ ಹೇಳುತ್ತಾರೆ.

ಪರಿಶಿಷ್ಟರಿಗೆ ಕೆನೆಪದರ ನೀತಿಯನ್ನು ಅಳವಡಿಸಬಾರದೆಂಬುದು ಸಂವಿಧಾನದ ಆಶಯ. ಅತ್ಯಂತ ಜ್ಞಾನವರ್ಯರಾದ ಈ ಇಬ್ಬರೂ ನ್ಯಾಯಮೂರ್ತಿಗಳು 'ಮಂಡಲ್ ಕೇಸ್' ಎಂದೇ ಪ್ರಖ್ಯಾತವಾದ ಇಂದ್ರಾ ಸಾಹ್ನಿ ಕೇಸನ್ನು ಓದದೆಯೇ ಸುಪ್ರೀಂ ಕೋರ್ಟ್ನಲ್ಲಿ ಕೆಲಸ ಮಾಡಲು ಸಾಧ್ಯವೆ ? ಮೀಸಲಾತಿ ನೀಡುವುದು ಸಮುದಾಯಕ್ಕೇ ಹೊರತು ವ್ಯಕ್ತಿಗಲ್ಲ ಎಂಬುದು ಇಲ್ಲಿ ಗಮನಾರ್ಹ. ಡಾ.ಅಂಬೇಡ್ಕರ್ ಅವರ ಬರಹಗಳು ಮತ್ತು ಬಾಷಣಗಳನ್ನು ಮತ್ತು ಸಂವಿಧಾನದ ಮೇಲಿನ ಚರ್ಚೆಗಳನ್ನು ಪೂರ್ವಗ್ರಹವಿಲ್ಲದೆ ಓದಿದರೆ ಇಂತಹ ಅನೇಕ ಗೊಂದಲಗಳು ಪರಿಹಾರವಾಗುತ್ತವೆ.

ಇಲ್ಲೊಂದು ಸಣ್ಣ ಕತೆಯಿದೆ...
ಒಬ್ಬ ಅಪಾರ ಹಣ ಮಾಡಿದ ದಲಿತ ಅಧಿಕಾರಿ ಎಲ್ಲಾ ಮೇಲ್ಜಾತಿ, ಮೇಲ್ವರ್ಗಗಳ ಜತೆಯಲ್ಲೇ ಬದುಕಿ ಬಾಳಿದ. ಗಣೇಶ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ ಕೂಡಾ ಮಾಡಿಸಿ ವಿಜೃಂಭಿಸಿದ. ಕಡೆಗೆ ಒಂದು ದಿನ ಎಲ್ಲರಂತೆ ಸತ್ತ. ಅವನ ಕಟ್ಟಕಡೆಯ ಆಸೆಯಂತೆ ಅವನ ದೇಹವನ್ನು ಅವರ ಗ್ರಾಮಕ್ಕೆ ತಂದರು. ಅವನ ಹೆಣವನ್ನು ಮೇಲ್ಜಾತಿಗಳಿರಲಿ, ಸಾರ್ವಜನಿಕ ಸ್ಮಶಾನದಲ್ಲೂ ಹೂಳಲು ಬಿಡಲಿಲ್ಲ! ಕಡೆಗೆ ದಲಿತರ ಸ್ಮಶಾನದಲ್ಲೇ ಹೂಳಬೇಕಾಯಿತು!

ಮೀಸಲಾತಿಯ ಲಾಭ ಸಿಕ್ಕಿದವರಿಗೇ ಸಿಗುತ್ತಿದೆ:ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ

ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಚಿ.ನಾ.ರಾಮು ಅವರ ‘ಬಲಿತ ದಲಿತರ ತುಳಿತ ನನ್ನ ಜನ ಅನಾಥ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು, ‘ಒಮ್ಮೆ ಮೀಸಲಾತಿ ಸೌಲಭ್ಯದ ಲಾಭ ಪಡೆದವರು ಮತ್ತೊಮ್ಮೆ ಪಡೆಯಬಾರದು. ಈ ರೀತಿ ಪಡೆಯುವುದು ಸಂವಿಧಾನದ ದೃಷ್ಟಿಯಲ್ಲಿ ಸರಿಯಲ್ಲ. ಆದರೆ, ಇಂದು ಮೀಸಲಾತಿಯ ಲಾಭ ಸಿಕ್ಕಿದವರಿಗೇ ಸಿಗುತ್ತಿದೆ. ಮೀಸಲಾತಿ ಎನ್ನುವುದು ಅವರಿಗೇ ಮೀಸಲಾಗಿದೆಯೇನೋ ಎಂಬ ಸಂದೇಹವಿದೆ. ಈ ಬಗ್ಗೆ ಒಮ್ಮೆ ಮಾತನಾಡಿದಾಗ ಸಾಕಷ್ಟು ವಿರೋಧ ಎದುರಿಸಬೇಕಾಯಿತು’ ಎಂದಿದ್ದರು.

* ಇದನ್ನೂ ಓದಿ...

*ಪರಿಶಿಷ್ಟ ಜಾತಿಯವರಿಗೂ ಕೆನೆಪದರ ಮೀಸಲಾತಿ ಅಗತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.