ಬೆಂಗಳೂರು: ‘ಸೈಬರ್ ಅಪರಾಧ ಜಾಸ್ತಿ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಅವಲಂಬನೆ ಹೆಚ್ಚುತ್ತಿದೆ. ತಪ್ಪು, ದ್ವೇಷದ ಸಂದೇಶಗಳಿಂದ ಸಾವುಗಳಾಗುತ್ತಿವೆ. ಭಯೋತ್ಪಾದಕ ಚಟುವಟಿಕೆಗಳಿಗೂ ಪ್ರಚೋದನೆ ಆಗುತ್ತಿದೆ. ಇದನ್ನೆಲ್ಲ ನಿಯಂತ್ರಣ ಮಾಡುವ ಅಗತ್ಯವಿದೆ. ಇದಕ್ಕಾಗಿ ಎಐ(ಕೃತಕ ಬುದ್ಧಿಮತ್ತೆ) ತಂತ್ರಾಂಶ ಖರೀದಿಗೆ ಡಿಜಿಪಿಯವರು ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೈಬರ್ ಅಪರಾಧ ನಿಯಂತ್ರಣ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕಾಗಿ ಅಗತ್ಯ ತಯಾರಿ, ಸಾಫ್ಟ್ವೇರ್ಗಳು ಬೇಕು, ಹಣ ಖರ್ಚು ಮಾಡಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ₹ 200 ಕೋಟಿಯಿಂದ ₹300 ಕೋಟಿ ಖರ್ಚು ಮಾಡುತ್ತಿದ್ದಾರೆ. ಡಿಜಿಪಿ ಪ್ರಣವ್ ಮೊಹಾಂತಿಯವರು ಇದಕ್ಕಾಗಿಯೇ ₹ 1 ಸಾವಿರ ಕೋಟಿಯ ಪ್ರಸ್ತಾವ ಸಲ್ಲಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.