ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಗೇಟ್ ತುಂಡಾಗಿ ನೀರು ಪೋಲಾಗುತ್ತಿರುವುದನ್ನು ನೋಡುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಮಧ್ಯಾಹ್ನ 1.30ಕ್ಕೆ ಅಣೆಕಟ್ಟಿಗೆ ತೆರಳಿದರು.
ಸಚಿವರು ಮುರಿದ ಗೇಟ್ ನೋಡಿದ ಬಳಿಕ ವೈಕುಂಠ ಅತಿಥಿಗೃಹದಲ್ಲಿ ಸಭೆ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.