ಮುಂದಿನ ಡಿಸೆಂಬರ್‌ಗೆ ಚುನಾವಣೆ
ರಾಜ್ಯದ ಗ್ರಾಮ ಪಂಚಾಯಿತಿಗಳ ಅವಧಿ ಒಂದು ವರ್ಷದ ಒಳಗೆ ಪೂರ್ಣಗೊಳ್ಳಲಿದೆ. 2025ರ ಡಿಸೆಂಬರ್‌ಗೆ ಚುನಾವಣೆ ನಡೆಯಲಿದೆ. ಮೀಸಲಾತಿ, ಕೋರ್ಟ್ ಪ್ರಕರಣ ಮತ್ತಿತರ ಕಾರಣಕ್ಕೆ ವಿಳಂಬವಾದ ಪಂಚಾಯಿತಿಗಳ ಚುನಾವಣೆ ಆಯಾ ಅವಧಿ ಪೂರ್ಣಗೊಂಡ ನಂತರ ಪ್ರತ್ಯೇಕವಾಗಿ ನಡೆಯಲಿವೆ. 2020ರಲ್ಲಿ ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಡಿ. 22ರಂದು ಮೊದಲ ಹಂತ, ಡಿ. 27ರಂದು ಎರಡನೇ ಹಂತದ ಚುನಾವಣೆ ನಡೆದಿತ್ತು. ಎರಡೂ ಹಂತಗಳಿಂದ 2,14,740 ಅಭ್ಯರ್ಥಿಗಳು ಪಂಚಾಯಿತಿ ಉಮೇದುವಾರಿಕೆ ಬಯಿಸಿ, ಸ್ಪರ್ಧೆಗೆ ಇಳಿದಿದ್ದರು. ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸಲಾಗಿತ್ತು. ಉಳಿದ ಕಡೆಗಳಲ್ಲಿ ಮತ ಪತ್ರಗಳ ಬಳಸಿ, ಮತದಾನ ಮಾಡಲು ಅವಕಾಶ ನೀಡಲಾಗಿತ್ತು.