ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಹೆಸರು, ವಿಳಾಸ ಹಾಗೂ ಯಾವುದೇ ರೀತಿಯ ಗುರುತುಗಳನ್ನು ಸಾರ್ವಜನಿಕವಾಗಿ ಹಾಗೂ ದಾಖಲೆಗಳಲ್ಲಿ ಬಹಿರಂಗ ಪಡಿಸುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಪೋಕ್ಸೊ ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ದೂರು ಅರ್ಜಿ, ಪ್ರಥಮ ವರ್ತಮಾನ ವರದಿ (ಎಫ್ಐಆರ್) ಹಾಗೂ ತನಿಖಾ ವರದಿಗಳಲ್ಲಿ (ದೋಷಾರೋಪ ಪಟ್ಟಿ) ನೊಂದ ಮಹಿಳೆ ಅಥವಾ ಮಕ್ಕಳ ಹೆಸರು, ವಿಳಾಸದ ಗೋಪ್ಯತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಕೆಲವು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ. ಅತ್ಯಾಚಾರ, ಪೋಕ್ಸೊ ಪ್ರಕರಣಗಳ ಪ್ರಥಮ ವರ್ತಮಾನ ವರದಿಯಲ್ಲಿ ನೊಂದವರ ಹೆಸರು, ವಿಳಾಸ ಸಾರ್ವಜನಿಕಗೊಳಿಸುವ ಹಾಗೂ ತನಿಖಾ ವರದಿಯಲ್ಲಿಯೂ ಸಹ ಗೋಪ್ಯತೆ ಕಾಪಾಡಿಕೊಳ್ಳದೇ ಇರುವುದು ಕಂಡುಬಂದಿದೆ. ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳ ವಿಚಾರಣೆಯ ವೇಳೆ ಆಕ್ಷೇಪಣೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಆದೇಶದಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಬೇಕು. ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲೇಖಿಸಿ, ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಸೂಚನೆಗಳು ಏನೇನು?

* ದೂರಿನ ಮೂಲ ಅರ್ಜಿಯಲ್ಲಿ ನೊಂದ ಮಹಿಳೆ ಹಾಗೂ ಮಕ್ಕಳ ಹೆಸರು, ವಿಳಾಸ ಮತ್ತು ಗುರುತುಗಳ ವಿವರಗಳು ಇರತಕ್ಕದ್ದು

* ದೂರು ಸ್ವೀಕರಿಸಿದ ನಂತರ ಠಾಣಾಧಿಕಾರಿ/ತನಿಖಾಧಿಕಾರಿಯು ಮೂಲ ದೂರಿನಲ್ಲಿ ಇರುವ ನೊಂದವರ ಗುರುತುಗಳ ಗೋಪ್ಯತೆ ಕಾಪಾಡಲು ಮೂಲ ಹೆಸರಿನ ಬದಲು ‘ಬೇರೆ ಹೆಸರು’ ಅಥವಾ ‘ಅಕ್ಷರ’ಗಳನ್ನು ನೀಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಮೂಲ ದೂರು ಮತ್ತು ಯಾವ ಬದಲಿ ಹೆಸರು ನೀಡಲಾಗಿದೆ ಎಂಬುದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು

* ಪ್ರಥಮ ವರ್ತಮಾನ ವರದಿಯಲ್ಲಿ ನೊಂದವರ ಮೂಲ ಹೆಸರು ದಾಖಲಿಸದೇ ಬದಲಿ ಹೆಸರು ಅಥವಾ ಅಕ್ಷರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಹೆಸರು ಬದಲಾಯಿಸಲಾಗಿದೆ ಎಂದು ಟಿಪ್ಪಣಿಯಲ್ಲಿ ನಮೂದಿಸಬೇಕು

* ತನಿಖೆಯ ಯಾವುದೇ ಹಂತದಲ್ಲೂ ಸಂತ್ರಸ್ತರ ವಿವರಗಳು ಸೋರಿಕೆ ಆಗದಂತೆ ತನಿಖಾಧಿಕಾರಿಗಳು ಎಚ್ಚರ ವಹಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.