ಬೆಂಗಳೂರು: ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ ‘ಇ– ಸ್ಟ್ಯಾಂಪ್’ ಬದಲಿಗೆ ‘ಡಿಜಿಟಲ್ ಇ– ಸ್ಟ್ಯಾಂಪ್’ ವ್ಯವಸ್ಥೆಯನ್ನು ಕಂದಾಯ ಇಲಾಖೆ ಜಾರಿಗೆ ತಂದಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ‘ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಈ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ‘ಡಿಜಿಟಲ್ ಇ-ಸ್ಟ್ಯಾಂಪ್’ ಕಡ್ಡಾಯಗೊಳಿಸಲಾಗುವುದು’ ಎಂದರು.

‘ನಾಗರಿಕರು ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು ‘ಡಿಜಿಟಲ್ ಇ– ಸ್ಟ್ಯಾಂಪ್’ ತಯಾರಿಸಿಕೊಳ್ಳಬಹುದು. ಇಂಟರ್ನೆಟ್ ಇದ್ದರೆ 24x7 ಜಗತ್ತಿನಲ್ಲಿ ಎಲ್ಲಿಯೇ ಕುಳಿತು ಈ ಸೇವೆಯನ್ನು ಪಡೆಯಬಹುದು. ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದೆ. ಸುರಕ್ಷಿತ ಮತ್ತು ವೇಗವಾಗಿ ಆನ್ಲೈನ್ ಪಾವತಿ ಮಾಡಲು ಕೂಡಾ ಅವಕಾಶವಿದೆ’ ಎಂದರು.

‘ಹಿಂದೆ ಛಾಪಾ ಕಾಗದಗಳನ್ನು ಮುದ್ರಿಸಲಾಗುತ್ತಿತ್ತು. ನಕಲಿ ಹಾಗೂ ಛಾಪಾ ಕಾಗದಗಳ ಮರುಬಳಕೆಯ ವಂಚನೆ ತೆಲಗಿ ಹಗರಣದಿಂದ ಬಹಿರಂಗವಾಗಿತ್ತು. ಅದನ್ನು ತಡೆಯಲು ಭೌತಿಕ ಸ್ಟಾಂಪ್ ಕಾಗದಗಳ ಬಳಕೆ ನಿಲ್ಲಿಸಿ, ‘ಇ-ಸ್ಟ್ಯಾಂಪ್’ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು’ ಎಂದು ಅವರು ವಿವರಿಸಿದರು.

‘ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಎಸ್ಎಚ್ಸಿಐಎಲ್) ಸಹಯೋಗದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಇ– ಸ್ಟ್ಯಾಂಪ್’ ಕಾಗದವನ್ನು ಮುದ್ರಿಸುತ್ತಿದೆ. ಆದರೆ, ಝೆರಾಕ್ಸ್ ಯಂತ್ರಗಳ ಮೂಲಕ ಇ-ಸ್ಟ್ಯಾಂಪ್ ಪ್ರಮಾಣಪತ್ರಗಳನ್ನು ನಕಲು ಅಥವಾ ಅವುಗಳಂತೆಯೇ ಕಾಣುವ ಪ್ರತಿಗಳನ್ನು ಸೃಷ್ಟಿಸಲು ಸಾಧ್ಯವಾಗಿತ್ತು. ಇದರಿಂದ ಮೂಲ ಹಾಗೂ ನಕಲಿ ಯಾವುದೆಂದು ಪತ್ತೆ ಮಾಡುವುದೇ ಸವಾಲಾಗಿದೆ. ಒಂದು ಉದ್ದೇಶಕ್ಕೆ ಖರೀದಿಸಿದ ಸ್ಟ್ಯಾಂಪ್ ಕಾಗದವನ್ನು ಬೇರೆ ರೀತಿಯ ದಸ್ತಾವೇಜಿಗೆ ಬಳಸುವ ಪ್ರಸಂಗಗಳೂ ನಡೆದಿವೆ. ನಕಲಿ, ನಕಲು ಪ್ರತಿ ಹಾಗೂ ತಪ್ಪು ವರ್ಗೀಕರಣದಿಂದ ಸರ್ಕಾರಕ್ಕೆ ಸೇರುವ ಸ್ಟ್ಯಾಂಪ್ ಶುಲ್ಕ ತಪ್ಪಿಸಿದ ಹಲವು ಘಟನೆಗಳೂ ನಡೆದಿವೆ’ ಎಂದರು.

‘ಡಿಜಿಟಲ್ ಇ– ಸ್ಟ್ಯಾಂಪ್ ವ್ಯವಸ್ಥೆ ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿ ಇರಲಿದೆ. ಹೊಸ ವ್ಯವಸ್ಥೆ ಜಾರಿಯಿಂದ ಇ-ಸ್ಟ್ಯಾಂಪ್ ವಿತರಣೆಗಾಗಿ ಎಸ್ಎಚ್ಸಿಐಎಲ್ಗೆ ಸರ್ಕಾರ ನೀಡುವ ಕಮಿಷನ್ ಮೊತ್ತ ಉಳಿತಾಯ ಆಗಲಿದೆ’ ಎಂದೂ ತಿಳಿಸಿದರು.

ಹೊಸ ವ್ಯವಸ್ಥೆಯಲ್ಲಿ ನಾಗರಿಕರು ಆಧಾರ್ ಆಧಾರಿತ ಇ– ಸಹಿ ಅಥವಾ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (ಡಿಎಸ್ಸಿ) ಬಳಸಿ ದಸ್ತಾವೇಜುಗಳಿಗೆ ಡಿಜಿಟಲ್ ಸಹಿ ಮಾಡಬಹುದು
ಕೃಷ್ಣ ಬೈರೇಗೌಡ ಕಂದಾಯ ಸಚಿವ

‘ಡಿಜಿಟಲ್ ಇ-ಸ್ಟಾಂಪ್’ ವಿಶೇಷತೆಗಳೇನು?

ಮನೆಯಿಂದಲೇ ಸ್ಟ್ಯಾಂಪ್ ಸೃಷ್ಟಿಸಬಹುದು. ಸೇವೆ 24x7 ಲಭ್ಯ

ಸುರಕ್ಷಿತ ಆನ್ಲೈನ್ ಪಾವತಿ ಹಣ ನೇರವಾಗಿ ಸರ್ಕಾರದ ಖಜಾನೆಗೆ ಸೇರಲಿದೆ

ಗುರುತಿನ ವಂಚನೆ ನಕಲಿ ಸಹಿ ತಡೆಯಲು ‘ಇ –ಸಹಿ’ ವ್ಯವಸ್ಥೆ

ಕಾಗದರಹಿತ ಪರಿಸರ ಸ್ನೇಹಿ ಸುರಕ್ಷಿತ ಮತ್ತು ವಿಶ್ವಾಸಾರ್ಹ

ಡಿಜಿಟಲ್ ರೂಪದ ದಸ್ತಾವೇಜುಗಳು ಕಾನೂನುಬದ್ಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.