‘ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆಯದು’
ಕಾರವಾರ: ‘ಶಾಸಕರಾದ ಇಕ್ಬಾಲ್ ಹುಸೇನ್, ರವಿ ಗಣಿಗ, ಶಿವಗಂಗಾ ಬಸವರಾಜ್ ಸೇರಿ ಕಾಂಗ್ರೆಸ್‌ನ ಕೆಲ ಶಾಸಕರು ಬಾಯಿ ಮುಚ್ಚಿಕೊಂಡಿದ್ದರೆ ನನಗೆ ಒಳ್ಳೆಯದಾಗುತ್ತದೆ’ ಎಂದೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ವಿದೇಶಕ್ಕೆ ಪ್ರವಾಸ ಹೋದ ಶಾಸಕರೂ ನಮ್ಮವರೆ. ಅವರು ಮರಳಿದ ಬಳಿಕ ಏಕೆ ಹೋಗಿದ್ದರು ಎಂದು ಕೇಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.