ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಶಿವಕುಮಾರ್ ಘನತೆಗೆ ತಕ್ಕಂತೆ ಮಾತಾಡಲಿ: ಅಶ್ವತ್ಥನಾರಾಯಣ

Published 6 ಸೆಪ್ಟೆಂಬರ್ 2023, 16:32 IST
Last Updated 6 ಸೆಪ್ಟೆಂಬರ್ 2023, 16:32 IST
ಅಕ್ಷರ ಗಾತ್ರ

ಬೆಂಗಳೂರು: ‘ರೌಡಿ ಕೊತ್ವಾಲ್‌ ರಾಮಚಂದ್ರನಿಗೆ ಚಾಕರಿ ಮಾಡಿದವರು ಮತ್ತು ಕಾಫಿ–ಟೀ ಸಪ್ಲೈ ಮಾಡಿದವರೆಲ್ಲ ನನ್ನ ಬಗ್ಗೆ ಮಾತನಾಡುತ್ತಾರೆ. ಈಗ ಅವರು ಹೊಂದಿರುವ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡುವುದು ಸೂಕ್ತ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

‘ದೇವರು ಅವರಿಗೆ ಒಳ್ಳೆಯ ಸ್ಥಾನವನ್ನು ಕೊಟ್ಟಿದ್ದಾನೆ. ಅದನ್ನು ಜನರ ಒಳಿತಿಗಾಗಿ ಬಳಸಿಕೊಳ್ಳಲಿ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಲಘುವಾಗಿ ಟೀಕೆ ಮಾಡುವುದು ಅವರಿಗೆ ಶೋಭಿಸುವುದಿಲ್ಲ’ ಎಂದು ಅವರು ಬುಧವಾರ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕುಟುಕಿದರು.

ನವರಂಗಿ ನಾರಾಯಣ ಎಂಬ ಪದ ಬಳಕೆಯನ್ನು ಕಟುವಾಗಿ ಟೀಕಿಸಿದ ಅವರು, ‘ಅಹಂಕಾರ ಮತ್ತು ದುರಹಂಕಾರದ ಮಾತಿಗೆ ಜನರೇ ಪಾಠ ಕಲಿಸುತ್ತಾರೆ. ಆಲೂಗಡ್ಡೆ ಹಾಕಿ ಬಂಗಾರ ತೆಗೆಯುವ ಇತಿಹಾಸ ಇರುವವರಿಗೆ ನನ್ನ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ’ ಎಂದರು.

‘ರಾಮನಗರದಲ್ಲಿ ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಬೇಕಿತ್ತು. ಆದರೆ ಅದನ್ನು ಕನಕಪುರಕ್ಕೆ ಒಯ್ದಿದ್ದಾರೆ. ಕಳ್ಳತನ ಮಾಡಿಕೊಂಡು ಹೋಗುವುದನ್ನು ಜನರು ಒಪ್ಪುವುದಿಲ್ಲ. ಈ ಮೂಲಕ ರಾಮನಗರದ ಜನರಿಗೆ ಅಗೌರವ ತೋರಿಸಿದ್ದಾರೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT