ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ನವರು ಸಿದ್ಧಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಮೆಂಟ್ ಮೂರ್ತಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಅನಾವರಣಗೊಳಿಸಿದರು.

ನಗರದಲ್ಲಿ ಶನಿವಾರ ‘ರಾಜ್ಯ ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶ’ ಮತ್ತು ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಸಿಎಂ ಹಾಗೂ ಡಿಸಿಎಂ ಪಾಲ್ಗೊಂಡರು.

ಬೆಳಿಗ್ಗೆ ಸಿದ್ದರಾಮಯ್ಯ ಅವರು ಬರುತ್ತಿದ್ದಂತೆಯೇ ಸಮಾವೇಶ ಶುರುವಾಯಿತು. ತಡವಾಗಿ ಬಂದ ಡಿ.ಕೆ. ಶಿವಕುಮಾರ, ವೇದಿಕೆಯಲ್ಲಿದ್ದ ಎಲ್ಲರನ್ನೂ ಮಾತನಾಡಿಸಿದರು. ಆದರೆ, ಮುಖ್ಯಮಂತ್ರಿ ಅವರನ್ನು ಮಾತನಾಡಿಸದೇ, ಅವರ ಪಕ್ಕವೇ ಹೋಗಿ ಕೂತರು. ಕೆಲ ನಿಮಿಷಗಳ ಬಳಿಕ ಮಾತನಾಡಿದರು.

ಮೂರ್ತಿ ಅನಾವರಣ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ನಗುತ್ತ ಮಾತನಾಡಿದರು. ನಂತರ, ಡಿ.ಕೆ. ಶಿವಕುಮಾರ ಭಾಷಣ ಮಾಡಿದರು. ಸಿದ್ದರಾಮಯ್ಯ ಅವರು ಭಾಷಣ ಮಾಡಲು ಮುಂದಾದಾಗ, ಶಿವಕುಮಾರ ವೇದಿಕೆಯಿಂದ ಇಳಿದು ಹೊರಟರು.
.ರಾಜ್ಯಕ್ಕೆ ಅನ್ಯಾಯ; ಬಾಯಿಬಿಡದ ಬಿಜೆಪಿ ಸಂಸದರು: ಸಿದ್ದರಾಮಯ್ಯ ಟೀಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.