ಬೆಂಗಳೂರು: ‘ಸಕಾರಣ ಮತ್ತು ಅಗತ್ಯ ಇಲ್ಲದೇ ಡಿಎನ್ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯ, ಸಾಂವಿಧಾನಿಕ ಚೌಕಟ್ಟುಗಳ ಅಡಿಯಲ್ಲಿ ದಂಪತಿಗಳಿಗೆ ಕೊಡಮಾಡಿದ ಗೋಪ್ಯತೆ ಹಾಗೂ ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ’ ಎಂದು ಹೈಕೋರ್ಟ್, ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಸಂಬಂಧ 39 ವರ್ಷದ ಪುರುಷರೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ (ಡಬ್ಲ್ಯು.ಪಿ 20342/2025) ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

‘ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗುವ ಅರ್ಜಿಗಳಿಗೆ ಉತ್ತರಿಸುವಾಗ ವಿಚಾರಣಾ ನ್ಯಾಯಾಲಯಗಳು ಸದರಿ ತೀರ್ಪಿನ ಸಮಯದಲ್ಲಿ ಮಾಡಲಾಗಿರುವ ಎಲ್ಲ ಅವಲೋಕನಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು. ಅಂತೆಯೇ, ಈ ತೀರ್ಪನ್ನು ಸಂಬಂಧಪಟ್ಟ ನ್ಯಾಯಾಲಯಗಳಿಗೆ ರವಾನಿಸಬೇಕು’ ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ತಾಕೀತು ಮಾಡಿದೆ.

ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿಜಯಕೃಷ್ಣ ಭಟ್ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಸಂವಿಧಾನದಲ್ಲಿ ನಿಗದಿಪಡಿಸಿದಂತೆ ಪರೀಕ್ಷೆ, ಗೋಪ್ಯತೆಯ ಹಕ್ಕು ಮತ್ತು ಘನತೆಯ ನಡುವೆ ಹೆಣೆದುಕೊಂಡಿರುವ ಸೂಕ್ಷ್ಮ ಸಮತೋಲನವನ್ನು ನಾವು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸದ ಹೊರತು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಬಾರದು’ ಎಂದು ಸ್ಪಷ್ಟಪಡಿಸಿದೆ.

ಪ್ರಕರಣವೇನು?: ಮೊದಲ ಹೆಂಡತಿಯ ಇಬ್ಬರು ವಯಸ್ಕ ಗಂಡು ಮಕ್ಕಳು ಹಾಗೂ ಎರಡನೇ ಹೆಂಡತಿಯ ವಯಸ್ಕ ಮಗನ ಮಧ್ಯೆ ಆಸ್ತಿ ಪಾಲುದಾರಿಕೆಗೆ ಸಂಬಂಧಿಸಿದಂತೆ 2016ರಿಂದ ಚನ್ನರಾಯಪಟ್ಟಣದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ನಲ್ಲಿ ಅಸಲು ದಾವೆಯ ವ್ಯಾಜ್ಯ ಮುಂದುವರಿದಿತ್ತು. ವ್ಯಾಜ್ಯದ ಸಮಯದಲ್ಲಿ ಅರ್ಜಿದಾರರನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ಅವರ ಪಿತೃತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು.

‘ರಿಟ್ ಅರ್ಜಿದಾರರು, ನಮ್ಮ ತಂದೆಗೆ ಜನಿಸಿದ ಮಗನಲ್ಲ. ನಮ್ಮ ತಂದೆಗೆ ಆದಾಗಲೇ ವಾಸೆಕ್ಟಮಿ (ನಸ್ಬಂದಿ) ಆಪರೇಷನ್ ಆಗಿತ್ತು. ಅವರಿಗೆ ಮಕ್ಕಳಾಗುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ, ಇವರ ಪಿತೃತ್ವದ ಸತ್ಯಾಸತ್ಯತೆ ಅರಿಯಲು ಡಿಎನ್ಎ ಪರೀಕ್ಷೆ ನಡೆಸಲು ಆದೇಶಿಸಬೇಕು’ ಎಂದು ಮೊದಲ ಹೆಂಡತಿಯ ಇಬ್ಬರು ಮಕ್ಕಳು (ಅಸಲು ದಾವೆಯ ವಾದಿಗಳು) ಕೋರಿದ್ದರು.

ಈ ತಕರಾರನ್ನು ಮಾನ್ಯ ಮಾಡಿದ್ದ ಸಿವಿಲ್ ನ್ಯಾಯಾಧೀಶರು, ಸಿವಿಲ್ ಪ್ರಕ್ರಿಯಾ ಸಂಹಿತೆ–1908ರ ನಿಯಮ 26, ನಿಯಮ 10 ಎ ಅಡಿಯಲ್ಲಿ ಡಿಎನ್ಎ ಪರೀಕ್ಷೆಗೆ ಸಮ್ಮತಿ ನೀಡಿ 2025ರ ಏಪ್ರಿಲ್ 5ರಂದು ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿದ್ದ 39 ವರ್ಷದ ಅರ್ಜಿದಾರರು, ‘ವಿಚಾರಣಾ ನ್ಯಾಯಾಲಯ ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕು’ ಎಂದು ಕೋರಿದ್ದರು. ಈ ಮನವಿಯನ್ನು ಮನ್ನಿಸಿರುವ ನ್ಯಾಯಪೀಠ, ‘ಒಂದು ವೇಳೆ ಡಿಎನ್ಎ ಪರೀಕ್ಷೆ ನಡೆಸಿ ಏನಾದರೂ ವರದಿ ಸಿದ್ಧಪಡಿಸಿದ್ದರೆ ಅಂತಹ ವರದಿ ಅಮಾನ್ಯವಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಕಲಂ 112ರ ಘನತೆಗೆ ಧಕ್ಕೆಯಾಗಬಾರದು...

‘ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರ ಅಸ್ತಿತ್ವವೇ ಸಾರ್ವಜನಿಕ ನೈತಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಅಥವಾ ಶಾಂತಿಯ ಭದ್ರತೆಯನ್ನು ಹೊಂದಿದೆ. ದಾಂಪತ್ಯ ಅಸ್ತಿತ್ವದಲ್ಲಿರುವಾಗ ಮತ್ತು ಗರ್ಭ ಧರಿಸಿದ 280 ದಿನಗಳ ಮೇಲೆ ಮಗು ಜನಿಸಿದರೆ ಅದು ಆತನೇ ತಂದೆ ಎಂದು ತಿಳಿಯಬೇಕು. ಈ ನಿರ್ಣಾಯಕ ಪುರಾವೆಯನ್ನು ಮೀರಿ ಒಂದು ವೇಳೆ ಮಗುವಿನ ಪಿತೃತ್ವವನ್ನು ಪ್ರಶ್ನಿಸಿದ್ದೇ ಆದರೆ ಅದು 112ರಲ್ಲಿ ಅಡಕವಾಗಿರುವ ತತ್ವಗಳನ್ನು ಮೀರಿದ ಕಾರಣಕ್ಕೆ ಉದ್ಭವಿಸಿದೆ ಎನ್ನುವಂತಿರಬೇಕು. ಇಂತಹ ಮೀರಿದ ಸಂದರ್ಭಗಳಲ್ಲಿ ಮಾತ್ರವೇ ಡಿಎನ್ಎ ಪರೀಕ್ಷೆಗೆ ಅನುಮತಿ ನೀಡುವುದು ಸಮ್ಮತ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಕಲಂ 112 ಸಾಮಾನ್ಯ ಸಂದರ್ಭಗಳಲ್ಲಿ ಮಹಿಳೆಯ ಘನತೆ ಏನು ಎತ್ತ ಎಂಬುದರ ಸೂಕ್ಷ್ಮ ಸಿದ್ಧಾಂತವನ್ನು ಒಳಗೊಂಡಿದೆ. ಮಗುವಿನ ತಂದೆ ತಾನೇ ಎಂಬುದು ಗೊತ್ತಿದ್ದರೂ ಕೆಲವೊಮ್ಮೆ ಪುರುಷ ನಿರಾಧಾರ ಆರೋಪ ಹೊರಿಸಿಬಿಡುತ್ತಾನೆ. ಮಹಿಳೆಯ ವ್ಯಕ್ತಿತ್ವವನ್ನು ನಾಶ ಮಾಡಿಬಿಡುತ್ತಾನೆ. ಈ ಹುಮ್ಮಸ್ಸಿನಲ್ಲಿ ರಕ್ತ–ಡಿಎನ್ಎ ಪರೀಕ್ಷೆಗೆ ಕೋರುತ್ತಾನೆ. ಆಗ ಮಹಿಳೆಯ ಘನತೆಗೆ ವಿನಾಕಾರಣ ಪೆಟ್ಟು ಬಿದ್ದಂತಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ಡಿಎನ್ಎ ಪರೀಕ್ಷೆ ಎಂದರೇನು?: ಡಿ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲವು (ಡಿಎನ್ಎ) ಮೂಲಭೂತವಾಗಿ ಆನುವಂಶಿಕ ಸಂಕೇತವಾಗಿದೆ. ಇದು ಇಬ್ಬರೂ ಪೋಷಕರಿಂದ ಅವರ ಮಕ್ಕಳಿಗೆ ಗುಣಲಕ್ಷಣಗಳನ್ನು ಹೊತ್ತೊಯ್ಯುತ್ತದೆ. ಪ್ರತಿಯೊಬ್ಬರಲ್ಲೂ ಇದು ವಿಶಿಷ್ಟವಾದ ಸಂಕೇತವನ್ನು ಹೊಂದಿರುತ್ತದೆ. ಯಾವುದೇ ಆನುವಂಶಿಕ ಅಸ್ವಸ್ಥತೆಗಳ ಮೌಲ್ಯಮಾಪನಕ್ಕೆ ಅಥವಾ ಕಾನೂನು ಉದ್ದೇಶಗಳ ದೃಢೀಕರಣಕ್ಕಾಗಿ ಪಿತೃತ್ವವನ್ನು ಸಾಬೀತುಪಡಿಸುವ ಸಂದರ್ಭದಲ್ಲಿ ಈ ಪರೀಕ್ಷೆ ಕೈಗೊಳ್ಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.