ಬೆಂಗಳೂರು: ಐಷಾರಾಮಿ ಕಾರು ಖರೀದಿಯ ನಕಲಿ ಇನ್ವಾಯ್ಸ್ಗಳನ್ನು ಸಲ್ಲಿಸಿ, ಹಲವು ಬ್ಯಾಂಕ್ಗಳಿಂದ ವಾಹನ ಸಾಲ ಪಡೆದಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ₹1.79 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಉದ್ಯಮಿಗಳಾದ ಕೆ.ಜಿ.ಭದ್ರಾರಾಧ್ಯ, ಅಶೋಕ್ ಕುಮಾರ್ ಅವರು ಔಡಿ ಮತ್ತು ಮರ್ಸಿಡೆಸ್ ಬೆಂಜ್ ಕಂಪನಿಯ ಕಾರುಗಳನ್ನು ಖರೀದಿಸಿದ್ದೇವೆ ಎಂದು ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಮತ್ತು ಸಾರಸ್ವತ್ ಸಹಕಾರ ಬ್ಯಾಂಕ್ಗಳಿಗೆ ನಕಲಿ ಇನ್ವಾಯ್ಸ್ ಸಲ್ಲಿಸಿದ್ದರು. ಆ ಮೂಲಕ ₹4.84 ಕೋಟಿ ಮೊತ್ತದ ವಾಹನ ಸಾಲಗಳನ್ನು ಪಡೆದಿದ್ದರು.

ಆದರೆ ಸಾಲದ ಹಣದಲ್ಲಿ ವಾಹನಗಳನ್ನು ಖರೀದಿಸದೆ, ತುಮಕೂರಿನ ಅಂತರಸನಹಳ್ಳಿಯಲ್ಲಿ ಕೃಷಿ ಜಮೀನು, ಬೆಂಗಳೂರಿನ ನಾಗರಬಾವಿಯಲ್ಲಿ ಮನೆಗಳನ್ನು ಖರೀದಿಸಿದ್ದರು. ಈ ಸಂಬಂಧ ಮೂರೂ ಬ್ಯಾಂಕ್ಗಳು 2016ರಲ್ಲಿ ಪ್ರಕರಣ ದಾಖಲಿಸಿದ್ದವು. ಬಹುಕೋಟಿ ವಂಚನೆ ಪ್ರಕರಣವಾದ ಕಾರಣ ಇ.ಡಿಯು ಇಸಿಐಆರ್ ದಾಖಲಿಸಿ, ತನಿಖೆ ಆರಂಭಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಸನಹಳ್ಳಿಯ ಕೃಷಿ ಜಮೀನನ್ನು ಈ ಹಿಂದೆಯೇ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈಗ ಭದ್ರಾರಾಧ್ಯ ಅವರ ಪತ್ನಿ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿದ್ದ ಎರಡು ಕಟ್ಟಡಗಳನ್ನು ಶುಕ್ರವಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.