ಬೆಂಗಳೂರು: ‘ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳು ತೆರವಾಗಿದ್ದು, ಆ ಸ್ಥಾನಗಳಿಗೆ ಅತಿಹಿಂದುಳಿದ ವರ್ಗ–ಸಮುದಾಯದ ಜನರನ್ನು ಆಯ್ಕೆ ಮಾಡಬೇಕು’ ಎಂದು ಆಲ್ ಇಂಡಿಯಾ ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಆ ಸ್ಥಾನಗಳಲ್ಲಿ ಈ ಹಿಂದೆ ಇದ್ದ ಪ್ರಬಲ ಪಕ್ಷ, ಜಾತಿ–ಸಮುದಾಯಗಳ ನಾಯಕರು ತಮ್ಮನ್ನು ಮತ್ತೆ ಆಯ್ಕೆ ಮಾಡುವಂತೆ ಒತ್ತಡ ಹೇರುತ್ತಿರುವುದರ ಬಗ್ಗೆ ವರದಿಯಾಗಿದೆ. ಆದರೆ ವಿಧಾನ ಪರಿಷತ್ತಿನಲ್ಲಿ ಈವರೆಗೂ ಪ್ರಾತಿನಿಧ್ಯ ಸಿಗದ ನೂರಾರು ಸಣ್ಣ ಸಮುದಾಯಗಳು ಇವೆ. ಆ ಸಮುದಾಯಗಳಿಗೆ ಅವಕಾಶ ನೀಡಬೇಕು’ ಎಂದು ಅವರು ಹೇಳಿದ್ದಾರೆ.

‘ಚುನಾವಣೆಗಳನ್ನು ಎದುರಿಸಲು ಹಣ ಬಲವಾಗಲಿ, ಜನ ಬಲವಾಗಲಿ ಈ ಸಮುದಾಯಗಳಿಗೆ ಇಲ್ಲ. ಅಂತಹ ಸಮುದಾಯದ ಜನರನ್ನು ನಾಮನಿರ್ದೇಶನ ಮಾಡಿದರೆ, ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ. ಬಲಿಷ್ಠ ಸಮುದಾಯಗಳು, ಅತಿ ಹಿಂದುಳಿದ ಸಮುದಾಯಗಳಿಗೆ ಅವಕಾಶ ಮಾಡಿಕೊಡುವ ಉದಾರತೆ ತೋರಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.