ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FAQ | ಉಚಿತ​ ವಿದ್ಯುತ್​: ಜನರ ಗೊಂದಲ, ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ

Published 7 ಜೂನ್ 2023, 15:01 IST
Last Updated 7 ಜೂನ್ 2023, 15:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್​ ಉಚಿತ್​ ವಿದ್ಯುತ್​ ನೀಡುವುದಾಗಿ ಘೋಷನೆ ಮಾಡಿದೆ. ಜೂನ್​ 1ರಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಜನರಲ್ಲಿ ಈ ಕುರಿತು ಗೊಂದಲಗಳಿವೆ. ಅದಕ್ಕಾಗಿ ಸರ್ಕಾರವೇ FAQ ರಚಿಸಿ, ಜನರ ಗೊಂದಲಗಳನ್ನು ನಿವಾರಿಸಲು ಮುಂದಾಗಿದೆ.

ಗೃಹ ಜ್ಯೋತಿ ಯೋಜನೆ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು ಪಟ್ಟಿ ಮಾಡಿ ಸರ್ಕಾರ ಉತ್ತರಿಸಿದೆ. ಸರ್ಕಾರ FAQ ರಚಿಸಿ ಪ್ರಕಟಿಸಿದೆ. ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

ಪ್ರ

1. ನಾನು ಈ ಯೋಜನೆಗೆ ಅರ್ಹವೇ?

ಕರ್ನಾಟಕ ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಪ್ರ

2. ಗೃಹ ಜ್ಯೋತಿ ಯೋಜನೆ ಎಂದರೇನು?

ಪ್ರ

3. ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು?

ಈ ಯೋಜನೆಯನ್ನು ಪಡೆಯಲು ಪ್ರತಿ ಗೃಹಬಳಕೆ ಗ್ರಾಹಕರು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ಲಿಂಕ್​ನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು. ನೋಂದಣಿ ಜೂನ್ 15ರಿಂದ ಪ್ರಾರಂಭವಾಗುತ್ತದೆ.

ಪ್ರ

4. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?

2023ರ ಜುಲೈನಲ್ಲಿ ಬಳಸಿದ ವಿದ್ಯುತ್‌ ಬಳಕೆಯನ್ನು, 2023ರ ಆಗಸ್ಟ್​​ನಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.

ಪ್ರ

5. ಈ ಯೋಜನೆಯನ್ನು ನಾನು ಹೇಗೆ ಮತ್ತು ಎಲ್ಲಿ ಪಡೆಯಬಹುದು?

ಈ ಯೋಜನೆಯನ್ನು ಪಡೆಯಲು ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್​ಸೈಟ್​​ನಲ್ಲಿ ಅರ್ಜಿ ಸಲ್ಲಿಸಬೇಕು. ಇದರ ಲಿಂಕ್​ನ್ನು ಶೀಘ್ರದಲ್ಲೇ ಒದಗಿಸಲಾಗುವುದು. ನೋಂದಣಿಯು ಜೂನ್ 15ರಿಂದ ಪ್ರಾರಂಭವಾಗುತ್ತದೆ.

ಪ್ರ

6. ಈ ಯೋಜನೆಯನ್ನು ಆಫ್​ಲೈನ್​(offline) ಮೂಲಕ ನಾನು ಪಡೆಯಬಹುದೇ?

ಹೌದು, ಎಲ್ಲಾ ಗೃಹಬಳಕೆ ಗ್ರಾಹಕರಿಗೆ ಗ್ರಾಮ ಒನ್‌, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು

ಪ್ರ

7. ಈ ಯೋಜನೆ ಪಡೆಯಲು ಯಾವುದೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು?

ಆಧಾರ್ ಸಂಖ್ಯೆ, ವಿದ್ಯುತ್​ ಬಿಲ್​ನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ, ಬಾಡಿಗೆ/ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ IDಯನ್ನು ಸಲ್ಲಿಸುವುದು.8. ಅರ್ಜಿ ಸಲ್ಲಿಸುವಾಗ ನಾನು ಶುಲ್ಕ ಪಾವತಿಸಬೇಕೆ?

ಪ್ರ

8. ಅರ್ಜಿ ಸಲ್ಲಿಸುವಾಗ ನಾನು ಶುಲ್ಕ ಪಾವತಿಸಬೇಕೆ?

ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾ ಸಿಂಧು ಪೋರ್ಟಲ್​ನಲ್ಲಿ ಪಾವತಿಸಬೇಕಾಗಿರುವುದಿಲ್ಲ.

ಪ್ರ

9. ನಾನು ಜೂನ್ ತಿಂಗಳ ವಿದ್ಯುತ್ ಬಿಲ್​ನ್ನು ಪಾವತಿಸಬೇಕೆ?

ಹೌದು, ಈ ಯೋಜನೆಯು 2023ರ ಜುಲೈ ವಿದ್ಯುತ್ ಬಳಕೆಗೆ ಅನ್ವಯಿಸಲಿದ್ದು, 2023ರ ಆಗಸ್ಟ್ 1ನೇ ಹಾಗೂ ನಂತರದ ಮಾಪಕ ಓದುವ ದಿನಾಂಕದಿಂದ ಅನ್ವಯಿಸುತ್ತದೆ.

ಪ್ರ

10. ನನಗೆ ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ, ನಾನು ಈ ಯೋಜನೆಗೆ ಅರ್ಹನೇ?

ಇಲ್ಲ, ಪ್ರತಿ ಗ್ರಾಹಕರು ಒಂದು ಮೀಟರ್​ಗೆ ಮಾತ್ರ ಈ ಯೋಜನೆಯಡಿ ಅರ್ಹರಾಗಿರುತ್ತಾರೆ.

ಪ್ರ

11. ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯುತ್ತೇನೆಯೇ?

ಹೌದು, ಸೇವಾ ಸಿಂಧುವಿನಿಂದ ಸ್ವೀಕೃತಿ ಸಂದೇಶವನ್ನು ನೋಂದಾಯಿತ ಗ್ರಾಹಕರಿಗೆ ಇಮೇಲ್ ಅಥವಾ SMS ಮೂಲಕ ಕಳುಹಿಸಲಾಗುತ್ತದೆ.

ಪ್ರ

12. ನಾನು ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ. ಯೋಜನೆಯ ಲಾಭವು ಯಾವಾಗ ನನ್ನ ಖಾತೆಗೆ ಸೇರಲು ಪ್ರಾರಂಭವಾಗುತ್ತದೆ?

2023ರ ಜುಲೈನಲ್ಲಿ ನೀಡಿದ ಬಿಲ್​ನ್ನು ಯೋಜನೆಯ ಲಾಭವಿಲ್ಲದೆ ಪಾವತಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳು ಮೀಟರ್ ಓದುವ ದಿನಾಂಕದಿಂದ ಅಂದರೆ 2023ರ 1ನೇ ಆಗಸ್ಟ್​​ನಿಂದ ಅಥವಾ ನಂತರ ಅನ್ವಯಿಸುತ್ತದೆ.

ಪ್ರ

13. ನಾನು ಅಪಾರ್ಟೆಂಟ್ (ವಸತಿ ಸಮುಚ್ಚಯ) ಮಾಲೀಕನಾಗಿದ್ದೇನೆ, ನಾನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದೇ?

ಹೌದು, ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಲಭ್ಯವಿದ್ದರೆ ಅಥವಾ ಸ್ಥಾಪಿಸಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಪ್ರ

14. ನಾನು ಬಾಡಿಗೆದಾರ; ಬಿಲ್ ಮಾಲೀಕರ ಹೆಸರಿನಲ್ಲಿದೆ. ನನಗೂ ಯೋಜನೆ ಅನ್ವಯವಾಗುವುದೇ?

ಹೌದು, ಆಧಾರ್ ಸಂಖ್ಯೆ, ಬಿಲ್​ನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ, ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ID ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.

ಪ್ರ

15. ಯೋಜನೆಯ ಅಡಿಯಲ್ಲಿ ಬಾಡಿಗೆ/ಭೋಗ್ಯದಾರನಾಗಿ ನಾನು ನೋಂದಾಯಿಸಲು ಸಲ್ಲಿಸಬೇಕಾದ ದಾಖಲೆಗಳು ಯಾವುದು?

ಬಾಡಿಗೆ ಭೋಗ್ಯದಾರರು ವಿಳಾಸ ಪುರಾವೆಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಸದರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಜೊತೆಗೆ ಬಾಡಿಗೆ ಭೋಗ್ಯದ ಕರಾರು ಪತ್ರವನ್ನು ಸಲ್ಲಿಸುವುದು.

ಪ್ರ

16. ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿದ್ದೇನೆ, ನನಗೆ ಲಾಭ ಸಿಗುತ್ತದೆಯೇ?

ಹೌದು, ಹೊಸ ಸಂಪರ್ಕಕ್ಕಾಗಿ ನಿಯಮಾವಳಿಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

ಪ್ರ

17. ನಾನು ಅಂಗಡಿಯ ಮಾಲೀಕನಾಗಿದ್ದೇನೆ. ನಾನು ಸಹ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದೇ?

ಇಲ್ಲ, ಗೃಹಬಳಕೆದಾರರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

ಪ್ರ

18. ನಾನು ಎಷ್ಟು ಉಚಿತ ಯೂನಿಟ್ ವಿದ್ಯುತ್‌ಗೆ ಅರ್ಹನಾಗುತ್ತೇನೆ? ತಿಂಗಳಿಗೆ 200 ಯೂನಿಟ್​​​ಗಳಿಗೆ ನಾನು ಅರ್ಹನೇ?

2022-23ರ ಸರಾಸರಿ ವಿದ್ಯುತ್ ಬಳಕೆ+ಶೇಕಡ 10% ಹೆಚ್ಚಳದ (ಎರಡು ಸೇರಿಸಿದರೆ ಒಟ್ಟು 200 ಯೂನಿಟ್‌ಗಳಿಗಿಂತ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಪ್ರ

19. ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬೇಕು?

ಖಾತೆ ಸಂಖ್ಯೆಯು ಪ್ರತಿ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಲಭ್ಯವಿರುತ್ತದೆ.

ಪ್ರ

20. ಈ ಯೋಜನೆಯನ್ನು ಪಡೆಯಲು ಖಾತೆ ಸಂಖ್ಯೆಯೊಂದಿಗೆ ಆಧಾರ್​ನ್ನು ಲಿಂಕ್ ಮಾಡುವುದು ಕಡ್ಡಾಯವೇ?

ಹೌದು, ಗ್ರಾಹಕ ಸಂಖ್ಯೆ/ಖಾತೆ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಪ್ರ

21. ನನ್ನ ಆಧಾರ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದೆ. ನಾನು ಈ ಯೋಜನೆ ಪಡೆಯಲು ಅರ್ಹನಾಗುತ್ತೇನೆಯೇ?

ಹೌದು, ನೀವು ಕರ್ನಾಟಕದ ವಿಳಾಸ ಪುರಾವೆಯೊಂದಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ವಾಸಿಸುತ್ತಿದ್ದರೆ, ನೀವು
ಯೋಜನೆಗೆ ಅರ್ಹರಾಗಿದ್ದೀರಿ.

ಪ್ರ

22. ನಾನು ವಿದ್ಯುತ್ ಬಿಲ್ ಬಾಕಿಯನ್ನು ಉಳಿಸಿಕೊಂಡಿದ್ದರೆ, ನಾನು ಈ ಯೋಜನೆಗೆ ಅರ್ಹನೇ?

ಹೌದು, ಆದರೆ ಜೂನ್ 30ರವರೆಗಿನ ವಿದ್ಯುತ ಬಾಕಿಯನ್ನು 3 ತಿಂಗಳೊಳಗೆ ಪಾವತಿಸಬೇಕು. ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

ಪ್ರ

23. ಒಂದು ವೇಳೆ ನಾನು ಈ ಯೋಜನೆಯ ಫಲಾನುಭವಿಯಾಗಿ ನನಗೆ ನಿಗದಿಪಡಿಸಿರುವ ಉಚಿತ ವಿದ್ಯುತ್​ಗಿಂತ ಜಾಸ್ತಿ ಯೂನಿಟ್ ಬಳಸಿದರೆ, ನಾನು ಆ ಹೆಚ್ಚಿನ ಯೂನಿಟ್ ಗಳಿಗೆ ಪಾವತಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ ಆ ಹೆಚ್ಚಿನ ಯೂನಿಟ್ ಬಳಕೆಯ ಬಿಲ್​ನ್ನು ಪಾವತಿಸದಿದ್ದರೆ, ನನ್ನನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುವುದೇ?

ಇಲ್ಲ. ಬಾಕಿ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿಯನ್ನು ಪಾವತಿಸಿದ ನಂತರ ಪುನಃ ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು.

ಪ್ರ

24. ವಿದ್ಯುತ್ ಬಿಲ್ ನನ್ನ ದಿವಂಗತ ತಂದೆಯ ಹೆಸರಿನಲ್ಲಿದೆ? ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು?

ವಿದ್ಯುತ್ ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾಯಿಸಬೇಕು. ತದ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲಾ ಉಪ ವಿಭಾಗಗಳಲ್ಲಿನ ಜನಸ್ನೇಹಿ ವಿದ್ಯುತ್‌ ಸೇವಾ ಕೌಂಟರ್‌ಗಳಲ್ಲಿ ಮಾಡಲಾಗುತ್ತದೆ.

ಪ್ರ

25. ನನ್ನ ಮಾಸಿಕ ಬಳಕೆಯು 200 ಯೂನಿಟ್‌ಗಳಿಗಿಂತ ಹೆಚ್ಚಿದ್ದರೆ, ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕೇ?

ಹೌದು. ಆ ನಿರ್ದಿಷ್ಟ ತಿಂಗಳಿಗೆ ಮಾತ್ರ ನೀವು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಪ್ರ

26. ನನ್ನ ವಿದ್ಯುತ್ ಬಳಕೆಯು ಉಚಿತ ಯೂನಿಟ್​ಗಳಿಗಿಂತ ಕಡಿಮೆಯಿದ್ದರೆ ಬಿಲ್ ಮೊತ್ತ ಏನಾಗುತ್ತದೆ?

ವಿದ್ಯುತ್ ಬಳಕೆಯು ಅರ್ಹ ಯೂನಿಟ್ ಗಳಿಗಿಂತ ಕಡಿಮೆಯಿದ್ದರೆ ನೀವು ಶೂನ್ಯ ಬಿಲ್​ನ್ನು ಪಡೆಯುತ್ತೀರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT