ನವದೆಹಲಿ: ಗೋದಾವರಿ–ಕೃಷ್ಣಾ–ಕಾವೇರಿ ನದಿಗಳನ್ನು ಜೋಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗೆ ರಾಜ್ಯ ಸರ್ಕಾರಗಳು ತಣ್ಣೀರು ಎರಚಿವೆ. ನದಿ ಜೋಡಣೆಯ ಕರಡು ಒಪ್ಪಂದಕ್ಕೆ ಕರ್ನಾಟಕ ಸೇರಿ ಐದು ರಾಜ್ಯಗಳು ಸಹಿ ಹಾಕಲು ನಿರಾಕರಿಸಿವೆ. ರಾಜ್ಯಗಳ ಜತೆಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಮನವೊಲಿಸಲು ಜಲಶಕ್ತಿ ಸಚಿವಾಲಯ ನಿರ್ಧರಿಸಿದೆ.

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ನವದೆಹಲಿಯಲ್ಲಿ ಡಿಸೆಂಬರ್ನಲ್ಲಿ ನಡೆದ ನದಿ ಜೋಡಣೆ ಸಮಿತಿ ಸಭೆಯು ಒಮ್ಮತಕ್ಕೆ ಬರಲು ವಿಫಲವಾಯಿತು. ನದಿ ಜೋಡಣೆಯ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿರುವ ಸಂಸ್ಥೆಯು ಕರಡು ಒಪ್ಪಂದಕ್ಕೆ ಸಹಿ ಹಾಕುವಂತೆ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿತು. ಆದರೆ, ಯೋಜನೆಯ ಈಗಿನ ಸ್ವರೂಪಕ್ಕೆ ತಮ್ಮ ಸಹಮತ ಇಲ್ಲ ಎಂದು ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಿದವು.

‘ಗೋದಾವರಿ ಮತ್ತು ಕೃಷ್ಣಾ ಕಣಿವೆಗಳ ನ್ಯಾಯಮಂಡಳಿಯ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಗೋದಾವರಿ ನದಿಯ ಹೆಚ್ಚುವರಿ ನೀರಿನ ಹಂಚಿಕೆಯನ್ನು ನಿರ್ಧರಿಸುವುದಾಗಿ ಕೇಂದ್ರ ಸರ್ಕಾರ 2015ರಲ್ಲಿ ಕರ್ನಾಟಕ ಸರ್ಕಾರಕ್ಕೆ ತಿಳಿಸಿತ್ತು. ಆದರೆ, ರಾಜ್ಯಕ್ಕೆ ಕಡಿಮೆ ನೀರು ಹಂಚಿಕೆ ಮಾಡಲಾಗಿದೆ. ಈ ಅನ್ಯಾಯ ಸರಿಪಡಿಸದಿದ್ದರೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಶ್ನೆಯೇ ಇಲ್ಲ’ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತು.

ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಬೇರೆ ರಾಜ್ಯಗಳಿಗೆ ಬಿಟ್ಟುಕೊಡಲು ಒಡಿಶಾ ಹಾಗೂ ಛತ್ತೀಸಗಢ ಸರ್ಕಾರಗಳು ಒಪ್ಪಲಿಲ್ಲ. ‘ಕೃಷ್ಣಾ ಜಲವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಒಪ್ಪಂದ ಮಾಡಿಕೊಳ್ಳಲು ಹೇಗೆ ಸಾಧ್ಯ’ ಎಂಬುದು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳ ಪ್ರಶ್ನೆ. ಇನ್ನೊಂದೆಡೆ, ಒಪ್ಪಂದಕ್ಕೆ ಸಹಿ ಹಾಕಲು ತಮಿಳುನಾಡು ಸರ್ಕಾರ ಉತ್ಸುಕತೆ ತೋರಿದೆ. ‘ಈ ನದಿ ಜೋಡಣೆಯಿಂದ ಹೆಚ್ಚು ಅನುಕೂಲವಾಗುವುದು ತಮಿಳುನಾಡಿಗೆ. ಕಾವೇರಿ ನದಿಯ ಹೆಚ್ಚುವರಿ ನೀರು ಲಭ್ಯವಾಗಲಿದೆ ಎಂಬ ಕಾರಣಕ್ಕೆ ತಮಿಳುನಾಡು ಸರ್ಕಾರವು ನದಿ ಜೋಡಣೆಗೆ ಒತ್ತಡ ಹೇರುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ನದಿ ಜೋಡಣೆಯಾದ ಬಳಿಕ ದಕ್ಷಿಣದ ರಾಜ್ಯಗಳಿಗೆ 147 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ರಾಜ್ಯಕ್ಕೆ 10.74 ಟಿಎಂಸಿ ಅಡಿ ನೀರು ನಿಗದಿಪಡಿಸಲಾಗಿದೆ. ಇದು ಬಹಳ ಕಡಿಮೆ. ಈ ಯೋಜನೆಯಿಂದ ರಾಜ್ಯಕ್ಕೆ ಭಾರಿ ಪ್ರಯೋಜನವೂ ಆಗುವುದಿಲ್ಲ’ ಎಂದು ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡ್ತಿ ನೀರಿಗೂ ಕನ್ನ

ಗೋದಾವರಿ–ಕಾವೇರಿ ನದಿಗಳ ಜೋಡಿಸುವ ಯೋಜನೆಯಲ್ಲಿ ಮೂರು ಭಾಗಗಳಿವೆ. ಈ ಯೋಜನೆಯಲ್ಲಿ ಗೋದಾವರಿ–ಕೃಷ್ಣಾ (ನಾಗಾರ್ಜುನಸಾಗರ), ಕೃಷ್ಣಾ–ಪೆನ್ನಾರ್ (ಸೋಮಶಿಲಾ) ಹಾಗೂ ಪೆನ್ನಾರ್–ಕಾವೇರಿ ನದಿಗಳ ಜೋಡಣೆ ಮಾಡಲಾಗುತ್ತದೆ

ಗೋದಾವರಿ ಕಣಿವೆಯ ಹೆಚ್ಚುವರಿ 7 ಸಾವಿರ ಮಿಲಿಯನ್ ಕ್ಯುಬಿಕ್ ಮೀಟರ್ (ಎಂಸಿಎಂ) ನೀರನ್ನು ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ಕಣಿವೆಯ ಜಾಗಗಕ್ಕೆ ಹರಿಸಿ 9.44 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಪ್ರಸ್ತಾವ ಸಿದ್ಧಪಡಿಸಿತ್ತು. ಬಳಿಕ 4 ಸಾವಿರ ಎಂಸಿಎಂಗೆ ಇಳಿಸಲಾಗಿತ್ತು

ಬೇಡ್ತಿ–ವರದಾ ನದಿ ಜೋಡಣೆಯನ್ನು ಈ ಯೋಜನೆಗೆ ಸೇರ್ಪಡೆ ಮಾಡಲಾಗಿತ್ತು

ಪರಿಷ್ಕೃತ ಪ್ರಸ್ತಾವದ ಪ್ರಕಾರ, ಗೋದಾವರಿ–ಕಾವೇರಿ ಜೋಡಣೆಯಿಂದ 41,89 ಎಂಸಿಎಂ ನೀರು ಸಿಗಲಿದೆ. ಬೇಡ್ತಿ–ವರದಾ ನದಿ ಜೋಡಣೆಯಿಂದ 524 ಎಂಸಿಎಂ ನೀರು ದೊರಕಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.