ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನಿಂದ 33 ನಗರಗಳಿಗೆ ಫ್ಲಿಕ್ಸ್‌ಬಸ್‌ ಸೇವೆ ಆರಂಭ

Published : 3 ಸೆಪ್ಟೆಂಬರ್ 2024, 15:48 IST
Last Updated : 3 ಸೆಪ್ಟೆಂಬರ್ 2024, 15:48 IST
ಫಾಲೋ ಮಾಡಿ
Comments

ಬೆಂಗಳೂರು: ಕೈಗೆಟಕುವ ದರದ ಮತ್ತು ಆರಾಮದಾಯಕ ಬಸ್‌ ಸೇವೆಗೆ ಹೆಸರುವಾಸಿಯಾದ ಜರ್ಮನಿಯ ಫ್ಲಿಕ್ಸ್‌ಬಸ್‌, ಬೆಂಗಳೂರಿನಿಂದ ದಕ್ಷಿಣ ಭಾರತದ 33 ಪ್ರಮುಖ ನಗರಗಳಿಗೆ ಬಸ್‌ ಸೇವೆ ಆರಂಭಿಸಿದೆ.

ಭಾರಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಫ್ಲಿಕ್ಸ್‌ಬಸ್‌ ಸೇವೆಗೆ ಚಾಲನೆ ನೀಡಿದರು.

ಸೆಪ್ಟೆಂಬರ್‌ 11ರಿಂದ ಕಂಪನಿಯ ಬಸ್‌ಗಳು ಕಾರ್ಯಾಚರಣೆ ಆರಂಭಿಸಲಿದ್ದು, ಮಂಗಳವಾರದಿಂದಲೇ ಬುಕ್ಕಿಂಗ್‌ ಆರಂಭವಾಗಿದೆ. ಆರಂಭಿಕ ರಿಯಾಯಿತಿ ಎಂದು ಸೆಪ್ಟೆಂಬರ್ 15ರವರೆಗಿನ ಎಲ್ಲ ಬುಕ್ಕಿಂಗ್‌ಗಳಿಗೆ ₹99 ಶುಲ್ಕ ಮತ್ತು ₹5 ಸೇವಾತೆರಿಗೆ ವಿಧಿಸಲಿದೆ.

ಬೆಂಗಳೂರಿನಿಂದ ಚೆನ್ನೈ, ಹೈದರಾಬಾದ್‌, ಕೊಯಮತ್ತೂರು, ವಿಜಯವಾಡ ಸೇರಿ 33 ನಗರಗಳು ಮತ್ತು ಈ ಮಾರ್ಗಗಳಲ್ಲಿ ಬರುವ ಎಲ್ಲಾ ನಗರ–ಪಟ್ಟಣಗಳಿಗೆ ಸೇವೆ ಇರಲಿದೆ.

ವಿಶ್ವದಾದ್ಯಂತ 43 ದೇಶಗಳಲ್ಲಿ ಸೇವೆ ಒದಗಿಸುತ್ತಿರುವ ಈ ಕಂಪನಿ, ಇದೇ ಫೆಬ್ರುವರಿಯಲ್ಲಿ ಉತ್ತರ ಭಾರತದಲ್ಲಿ ಸೇವೆ ಆರಂಭಿಸಿತ್ತು. ಈಗ ದಕ್ಷಿಣ ಭಾರತದಲ್ಲಿ ಸೇವೆ ಆರಂಭಿಸಿದೆ. ಕಂಪನಿಯು ತನ್ನ ಬಸ್‌ಗಳು ಮತ್ತು ಇತರ ಖಾಸಗಿ ಬಸ್‌ ಸೇವಾ ಕಂಪನಿಗಳ ಸಹಯೋಗದಲ್ಲಿ ಸೇವೆ ಒದಗಿಸಲಿದೆ.

ಬಸ್ ಸಂಚಾರದಲ್ಲಿ ಭಾರತವು ಜಗತ್ತಿನ ಎರಡನೇ ದೊಡ್ಡ ಮಾರುಕಟ್ಟೆ. ಫ್ಲಿಕ್ಸ್‌ಬಸ್‌ ಕಂಪನಿಯು ಪರಿಸರ ಸ್ನೇಹಿ ಇಂಧನಗಳ ಬಳಕೆಗೆ ಒತ್ತು ನೀಡಬೇಕು
ಎಂ.ಬಿ.ಪಾಟೀಲ ಕೈಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT