ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಪತ್ನಿಗಾಗಿ ಮರವೇರಿ ಮಾವಿನ ಕಾಯಿ ಕಿತ್ತು ಕೊಟ್ಟಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜನಾರ್ದನ ರೆಡ್ಡಿ ಖಾಸಗಿ ಕಾರ್ಯಕ್ರಮ ನಿಮಿತ್ತ ಆಂಧ್ರಪ್ರದೇಶದಲ್ಲಿರುವ ಅವರಮಾವನ ಮನೆಗೆ ತೆರಳಿದ್ದರು. ಈ ವೇಳೆ ಪತ್ನಿ ಅರುಣಾ ಅವರೊಂದಿಗೆ ತೋಟಕ್ಕೆ ಭೇಟಿ ನೀಡಿ, ಮಾವಿನ ಕಾಯಿಯನ್ನು ಕಿತ್ತು ಕೊಟ್ಟಿದ್ದಾರೆ. ಈ ಕುರಿತು ವಿಡಿಯೊವೊಂದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
‘ನೆನಪಿಗೆ ಬಂದ ಆ ಬಾಲ್ಯದ ದಿನಗಳು ...
ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ನಮ್ಮ ಮಾವನವರ ಊರಿಗೆ ತೆರಳಿದ್ದೆ.
ಅದೇ ಸಮಯದಲ್ಲಿ ನಮ್ಮ ಮಾವನವರ ತೋಟಕ್ಕೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾ ಜೊತೆಗೆ ಭೇಟಿ ಕೊಟ್ಟಿದ್ದೆ.

ತೋಟದಲ್ಲಿ ಇಪ್ಪತ್ತು ಏಳು ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡಗಳು ಹೆಮ್ಮರವಾಗಿ ಬೆಳೆದು ಮಾವಿನ ಹಣ್ಣುಗಳಿಂದ ತುಂಬಿಕೊಂಡ ದೃಶ್ಯ ಮನ ಸೆಳೆಯಿತು. ಕೂಡಲೇ ನಾನೇ ಮರವನ್ನು ಹತ್ತಿ ಮಾವಿನ ಹಣ್ಣನ್ನು ಕಿತ್ತುನನ್ನ ಶ್ರೀಮತಿಗೆ ನೀಡಿದೆ.

ಮರವೇರಿ ಇಳಿದ ತಕ್ಷಣ ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು ಜೊತೆಯಲ್ಲಿದ್ದ ಸ್ನೇಹಿತರು ನೆನಪಿಗೆ ಬಂದರು’ಎಂದುಗಾಲಿ ಜನಾರ್ದನ ರೆಡ್ಡಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.