ಶಿವಕುಮಾರ್ ಅವರನ್ನೇ ಕೇಳಿ: ಪರಮೇಶ್ವರ
‘ರನ್ಯಾ ರಾವ್‌ಗೆ ಉಡುಗೊರೆಯಾಗಿ ಹಣ ಕೊಟ್ಟಿರಬಹುದು’ ಎಂಬ ಶಿವಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪರಮೇಶ್ವರ ಈ ಕುರಿತು ಮಾಹಿತಿ ಇಲ್ಲ. ಅವರನ್ನೇ ಕೇಳಿ ಎಂದು ಹೇಳಿದರು. ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಕಾರಣಕ್ಕಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಇ.ಡಿ. ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಎಂದು ಯಾರು ಹೇಳಿದ್ದಾರೆ’ ಎಂದು ಪ್ರಶ್ನಿಸಿದರು. ‘ಯಾರೋ ಹೇಳಿದ ತಕ್ಷಣ ಉತ್ತರ ಕೊಡಲು ಸಾಧ್ಯವಿಲ್ಲ. ಮೊದಲು ತನಿಖೆ ನಡೆದು, ವರದಿ ಬರಲಿ ನೋಡೋಣ’ ಎಂದರು.