ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೈಲುವಾಸ ನೆನೆದು ಕಣ್ಣೀರಾದ ರೇವಣ್ಣ: ಜಿ.ಟಿ. ದೇವೇಗೌಡ

Published 13 ಮೇ 2024, 11:48 IST
Last Updated 13 ಮೇ 2024, 11:48 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೋಮವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ  ಭೇಟಿ, ಪಕ್ಷದ ಶಾಸಕ ಎಚ್‌.ಡಿ. ರೇವಣ್ಣ ಅವರ ಆರೋಗ್ಯ ವಿಚಾರಿಸಿದರು.

ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರೇವಣ್ಣ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈಗ ಅರಾಮಾಗಿದ್ದಾರೆ. ಜತೆಗೆ ಚಹ ಕುಡಿದೆವು. ಯಾವುದೇ ತಪ್ಪು ಮಾಡದೇ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಜೈಲಿಗೆ ಬರುವಂತಾಯಿತು ಎಂದು 10 ನಿಮಿಷ ಕಣ್ಣೀರು ಸುರಿಸಿದರು. ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿದ್ದಾರೆ. ಅಂಥವರಿಗೆ ಇಂತಹ ಸ್ಥಿತಿ ಬಂದಿದ್ದರಿಂದ ನೊಂದಿದ್ದಾರೆ’ ಎಂದು ಹೇಳಿದರು.

‘ಅಪಹರಣ ಪ್ರಕರಣದ ಸಂತ್ರಸ್ತೆ ಹುಣಸೂರಿನ ಮನೆಯಲ್ಲೇ ಇದ್ದರು. ಅಲ್ಲಿಂದಲೇ ಪೊಲೀಸರು ಕರೆದುಕೊಂಡು ಹೋದರು ಎಂದು ಅವರ ಮಗಳು–ಅಳಿಯ ಹೇಳಿದ್ದಾರೆ. ಸಂತ್ರಸ್ತ ಮಹಿಳೆಯ ಹೇಳಿಕೆಯೂ ಹರಿದಾಡುತ್ತಿದೆ. ಮುಂದೆ ಏನಾಗುತ್ತದೆಯೋ ನೋಡೋಣ’ ಎಂದರು.

ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಎ. ಮಂಜು ಅವರ ಹೆಸರು ಕೇಳಿಬಂದಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಎಸ್‌ಐಟಿ ತನಿಖೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬೆನ್ನು ತಟ್ಟಿಕೊಂಡಿದ್ದಾರೆ. ನಮಗೂ ವಿಶ್ವಾಸವಿದೆ. ಸರಿಯಾದ ತನಿಖೆ ನಡೆದರೆ ಎಲ್ಲರೂ ಹೊರಗೆ ಬರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT