ರಾಯಚೂರು: ‘ಎನ್‌ಆರ್‌ಸಿ, ಸಿಎಎ ಕಾಯ್ದೆಗಳ ಜಾರಿಯಿಂದ ಭಾರತವನ್ನುಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಇದನ್ನು ದೆಹಲಿ ಜನತೆಯೇ ಚುನಾವಣೆ ಮೂಲಕ ತೀರ್ಮಾನ ಮಾಡಿ ತೋರಿಸಿದ್ದಾರೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ನಗರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಮೊದಲು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಕೇಜ್ರಿವಾಲ್ ಜಾತಿ, ಧರ್ಮಾಧಾರಿತ ಮತಗಳಿಂದ ಗೆದ್ದಿಲ್ಲ. ಬಿಜೆಪಿಗೆ ಶೇಕಡಾವಾರು ಮತಗಳು ಕಡಿಮೆ ಬಂದಿವೆ. ಸದ್ಯಕ್ಕೆ ಒಂಭತ್ತು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ’ ಎಂದು ತಿಳಿಸಿದರು.
‘ದೇಶದಲ್ಲಿ ಮೂರನೇ ರಂಗದ ಶಕ್ತಿ ಈಗ ಉಳಿದಿಲ್ಲ. ನಾನು ರಾಜ್ಯಸಭೆಗೆ ಹೋಗುವ ಸಾಧ್ಯತೆ ಇಲ್ಲ’ ಎಂದರು.