ಬೆಂಗಳೂರು: ಹೃದಯಾಘಾತದಿಂದ 24 ಗಂಟೆಗಳಲ್ಲಿ ರಾಜ್ಯದಲ್ಲಿ ವೈದ್ಯ ಸೇರಿದಂತೆ ಒಟ್ಟು ಆರು ಮಂದಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಹಾಸನದಲ್ಲಿ ಮೂವರು, ಧಾರವಾಡ ಜಿಲ್ಲೆಯಲ್ಲಿ ಇಬ್ಬರು, ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಮೃತದಲ್ಲಿ ಮೂವರು 30 ವರ್ಷ ಒಳಗಿನವರಾಗಿದ್ದರೆ, ಇತರ ಮೂವರು 45–48 ವರ್ಷ ವಯಸ್ಸಿನವರು. ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿಂದೆಯೇ ಆತಂಕವೂ ಹೆಚ್ಚಿದ್ದು, ಹೆಚ್ಚಿನ ಜನರು ಆಸ್ಪತ್ರೆಗಳತ್ತ ಮುಖ ಮಾಡಿದ್ದು,ತಪಾಸಣೆಗೆ ಒಳಗಾಗುತ್ತಿದ್ದಾರೆ.

ಹಾಸನ ವರದಿ: ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಮುಂದುವರಿದಿದ್ದು ಮತ್ತೆ ಮೂವರು ಮೃತಪಟ್ಟಿದ್ದಾರೆ. ಇವರು 30 ವರ್ಷ ವಯಸ್ಸಿನೊಳಗಿನವರು.

ಹೊಳೆನರಸೀಪುರ ತಾಲ್ಲೂಕಿನ ಸೋಮನಹಳ್ಳಿ ಕೊಪ್ಪಲು ಗ್ರಾಮದ ಸಂಜಯ್ (27), ತಾಲ್ಲೂಕಿನ ಕೊಮ್ಮೆನಹಳ್ಳಿಯ ಗೃಹಿಣಿ ಹರ್ಷಿತಾ (22) ಹಾಗೂ ಬೇಲೂರು ತಾಲ್ಲೂಕು ಮಾದೀಹಳ್ಳಿಯ ರವಿಕುಮಾರ್ (30) ಮೃತರು.

ಸಂಜಯ್ ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಬಂದ ನಂತರ ರಕ್ತದೊತ್ತಡ ಹೆಚ್ಚಾಗಿದ್ದು, ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಸೋಮನಹಳ್ಳಿ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂಬಂಧಿಕರು, ಹಳ್ಳಿ ಮೈಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಂದೂವರೆ ತಿಂಗಳ ಬಾಣಂತಿಯಾಗಿದ್ದ ಹರ್ಷಿತಾ, ತವರೂರಾದ ಶಿವಮೊಗ್ಗ ಜಿಲ್ಲೆಯ ಆಯನೂರಿಗೆ ತೆರಳಿದ್ದರು. ಅಲ್ಲಿ ಹೃದಯಾಘಾತ ಆಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪತಿಯ ಊರಾದ ಕೊಮ್ಮೆನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ರವಿಕುಮಾರ್ ಅವರು ಒಂಬತ್ತು ತಿಂಗಳ ಮಗನ ಜೊತೆ ಆಟವಾಡುವಾಗ ಹೃದಯಾಘಾತ ಸಂಭವಿಸಿದೆ. ಮಾದೀಹಳ್ಳಿ ಗ್ರಾಮದ ಅವರು, ತವರೂರಾದ ಸಂಶಟ್ಟಿಹಳ್ಳಿಯಲ್ಲಿದ್ದ ಪತ್ನಿ ನೋಡಲು ಹೋಗಿದ್ದರು. ಸೋಮವಾರ ಸಂಜೆ ಮಗು ಜೊತೆ ಆಟವಾಡುವಾಗ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ. ಕೃಷಿಕರಾಗಿದ್ದ ಅವರು 2 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಾದೀಹಳ್ಳಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು.

ಧಾರವಾಡ ಜಿಲ್ಲೆಯ ಇಬ್ಬರು ಸಾವು

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ಇಬ್ಬರು ಹೃದಯಾಘಾತದಿಂದ ಮೃತ
ಪಟ್ಟಿದ್ದಾರೆ. ಯಮನೂರ ಗ್ರಾಮದ ನಿವಾಸಿ ಫಕ್ಕಿರಪ್ಪ ಮಲ್ಲಪ್ಪ ಬಣಗಾರ (45) ಸೋಮವಾರ ನಿಧನರಾದರು. ಅವರಿಗೆ ತಾಯಿ, ಪತ್ನಿ ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.

ನವಲಗುಂದದ ಸಿದ್ದಾಪುರ ಓಣಿಯ ನಿವಾಸಿ ಮುತ್ತಪ್ಪ ಶಂಕರಪ್ಪ ಪೂಜಾರ (44) ಮಂಗಳವಾರ ನಿಧನರಾದರು. ಅವರಿಗೆ ತಾಯಿ, ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ.

ಗದಗ ವರದಿ: ಗದಗ ತಾಲ್ಲೂಕಿನಲ್ಲಿ ಜೂನ್ನಲ್ಲಿ ಐವರು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಅವರಲ್ಲಿ ಮೂವರು 35 ರಿಂದ 40 ವರ್ಷದೊಳಗಿನವರು’ ಎಂದು ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ನೀಲಗುಂದ ತಿಳಿಸಿದ್ದಾರೆ.

‘ಜಿಲ್ಲಾ ಆಸ್ಪತ್ರೆಯಲ್ಲಿ ಈ ವರ್ಷ ಜೂನ್ವರೆಗೆ 34 ಮಂದಿ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಈ ಪೈಕಿ ಆರು ಮಂದಿ 50 ವರ್ಷದೊಳಗಿನವರು’ ಎಂದು ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಕುಸಿದು ಬಿದ್ದಿದ್ದ ವೈದ್ಯ ಸಾವು

ಹೊಳೆಹೊನ್ನೂರು (ಶಿವಮೊಗ್ಗ) ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಎನ್.ಸಂದೀಪ್ (48) ಸೋಮವಾರ ರಾತ್ರಿ ಹೃದಯಾಘಾತದಿಂದ ಸಾವಿಗೀಡಾದರು. 3 ದಿನದ ಹಿಂದೆ ಮನೆಯಲ್ಲಿ ಕುಸಿದು ಬಿದ್ದಿದ್ದ ಸಂದೀಪ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ವರದಿಗೆ 10 ದಿನ ಗಡುವು: ಆರೋಗ್ಯ ಸಚಿವ

‘ಹಾಸನದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ 10 ದಿನಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ಈ ವರದಿ ಆಧರಿಸಿ ಹೃದಯಾಘಾತ ತಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಠಾತ್ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಕೋವಿಡ್ ಹಾಗೂ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರ ಅಧ್ಯಕ್ಷತೆ
ಯಲ್ಲಿ ಈ ಹಿಂದೆ ಸಮಿತಿ ರಚಿಸಲಾಗಿತ್ತು. ಹಾಸನದಲ್ಲಿ ವರದಿಯಾಗುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ಇದೇ ಸಮಿತಿಗೆ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಹೃದಯಾಘಾತಕ್ಕೆ ಒಳಗಾದವರ ವಯಸ್ಸು, ವೈದ್ಯಕೀಯ ಇತಿಹಾಸ ಸೇರಿ ವಿವಿಧ ಅಂಶಗಳನ್ನು ಪರಿಗಣಿಸಿ ಸಮಿತಿ ಅಧ್ಯಯನ ಕೈಗೊಳ್ಳಲಿದೆ. ಈ ಅಧ್ಯಯನದ ಬಳಿಕ ನಿಖರ ಕಾರಣ ತಿಳಿಯಲಿದೆ’ ಎಂದರು.

‘ಬದಲಾದ ಜೀವನಶೈಲಿಯಿಂದ ಸಹಜವಾಗಿಯೇ ವಿವಿಧ ಕಾಯಿಲೆಗಳಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದೆ. ಜನರು ಉತ್ತಮ ಜೀವನಶೈಲಿ ಅಳವಡಿಸಿಕೊಂಡು, ಹೃದಯದ ಆರೋಗ್ಯಕ್ಕೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

‘ಹೃದಯ ತಪಾಸಣೆ ಹಾಗೂ ಚಿಕಿತ್ಸೆಗೆ ಇಲಾಖೆಯು ಆದ್ಯತೆ ನೀಡಿದ್ದು, ‘ಸ್ಟೆಮಿ’ (ಹೃದಯ ಸ್ನಾಯುವಿನ ಸೋಂಕು ನಿವಾರಣೆ) ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ. ಹಾಸನದಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದಂತೆ 2023ರ ಮಾರ್ಚ್ನಿಂದ 2025ರ ಮೇ ತಿಂಗಳ ಅವಧಿಯಲ್ಲಿ ಈ ಕಾರ್ಯಕ್ರಮದಡಿ 37,847 ಮಂದಿಗೆ ಇಸಿಜಿ ಮಾಡಲಾಗಿದೆ. 480 ಪ್ರಕರಣಗಳಲ್ಲಿ ಹೃದಯ ಸ್ನಾಯುವಿನ ಸೋಂಕು ದೃಢಪಟ್ಟಿದ್ದು, ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇವರಲ್ಲಿ 420 ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, 60 ಮಂದಿ ಮೃತ
ಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಹೃದಯಾಘಾತಕ್ಕೆ ಕೊರೊನಾ ಸೋಂಕು ಅಥವಾ ಕೋವಿಡ್ ಲಸಿಕೆ ಕಾರಣವೆಂದು ಹೇಳಲು ಪುರಾವೆಗಳಿಲ್ಲ. ಜಗತ್ತಿನಾದ್ಯಂತ ಲಸಿಕೆ ನೀಡಲಾಗಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಥವಾ ರಾಷ್ಟ್ರ ಮಟ್ಟದಲ್ಲಿ ಅಧ್ಯಯನ ನಡೆಯಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಂತಹ (ಐಸಿಎಂಆರ್) ಸಂಸ್ಥೆಗಳು ಅಧ್ಯಯನ ಕೈಗೊಳ್ಳಬೇಕು. ನಮ್ಮ ವ್ಯಾಪ್ತಿಯಲ್ಲಿ ಈ ಅಧ್ಯಯನ ಕಷ್ಟ. ಆದರೂ ಮುಖ್ಯಮಂತ್ರಿ ಅವರ ಸೂಚನೆ ಅನುಸಾರ ರಾಜ್ಯದಲ್ಲಿ ಅಧ್ಯಯನಕ್ಕೆ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.