ಮಡಿಕೇರಿ/ಮಂಗಳೂರು: ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು ಸೇರಿದಂತೆ ವಿವಿಧೆಡೆ ಗುರುವಾರ ಬಿರುಸಿನ ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆ ಅಬ್ಬರಿಸಿದ್ದು, ಜನಜೀವನ ನಲುಗಿದೆ. ಕೆಲವೆಡೆ ಬುಧವಾರ ರಾತ್ರಿಯಿಂದ ಗುರುವಾರ ಹಗಲಿಡೀ ಸುರಿದ ಮಳೆಯಿಂದ ನದಿಗಳು ತುಂಬಿ ಹರಿದಿದ್ದು ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ಎಲ್ಲ ನದಿಗಳು ಅಪಾಯದಂಚು ತಲುಪಿವೆ. ಅಂಗನವಾಡಿಗಳು, ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜುಲೈ 19ರಂದು ರಜೆ ಘೋಷಿಸಲಾಗಿದೆ.

ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಮಡಿಕೇರಿ ತಾಲ್ಲೂಕಿನ ಕರ್ತೋಜಿ ಎಂಬಲ್ಲಿ ಗುಡ್ಡ ಕುಸಿಯುವ ಹಂತ ತಲುಪಿದೆ. ಹೀಗಾಗಿ, ಇಲ್ಲಿ ಎಲ್ಲ ಬಗೆಯ ವಾಹನ ಸಂಚಾರವನ್ನು ಜುಲೈ 22ರವರೆಗೆ ನಿತ್ಯ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.

ಜಿಲ್ಲೆಯ ಮೂಲಕ ಮಂಗಳೂರಿನಿಂದ ಮೈಸೂರು, ಬೆಂಗಳೂರಿಗೆ ತೆರಳುವ ವಾಹನಗಳು ಚಾರ್ಮಾಡಿ ಘಾಟ್–ಕೊಟ್ಟಿಗೆಹಾರ ಮೂಲಕ ಪ್ರಯಾಣಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ಕೊಡಗಿನಲ್ಲಿ 22 ಮನೆಗಳು ಕುಸಿದಿವೆ. ಬಿರುಸಾದ ಗಾಳಿಗೆ 51 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಗೋಣಿಕೊಪ್ಪಲುವಿನ 4 ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಲು ಕೀರೆಹೊಳೆಯಲ್ಲಿ ₹ 6.5 ಲಕ್ಷ ವೆಚ್ಚದಲ್ಲಿ ಈಚೆಗಷ್ಟೇ ನಿರ್ಮಿಸಿದ್ದ ಕಸದ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ಭಾಗಮಂಡಲದಲ್ಲಿ ನದಿ ನೀರಿನ ಪ್ರವಾಹ ಭಗಂಡೇಶ್ವರ ದೇಗುಲದ ಅಂಗಳ ತಲುಪಿದೆ.

ಜಡಿ ಮಳೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರದಲ್ಲಿ ಬಿರುಗಾಳಿಯೊಂದಿಗೆ ಮಳೆ ಆರ್ಭಟಿಸುತ್ತಿದ್ದು, ಮನೆಯಿಂದ ಹೊರಗೆ ಬರಲು ಅವಕಾಶ ನೀಡದಷ್ಟು ಮಳೆ ಸುರಿದಿದೆ. ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಬಾಳೆಹೊನ್ನೂರಿನಲ್ಲೂ ಇದೇ ಸ್ಥಿತಿ ಇದೆ. ಹಲವೆಡೆ ಮನೆಗಳು ಕುಸಿದಿದ್ದು, ಮರ ಮತ್ತು ವಿದ್ಯುತ್ ಕಂಬಗಳು ಉರುಳಿವೆ.

ತುಂಗಾ, ಭದ್ರಾ, ನೇತ್ರಾವತಿ, ವೇದಾವತಿ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಲ್ಲಲ್ಲಿ ಸಣ್ಣದಾಗಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಕೆಲವೆಡೆ ಮಳೆಯ ನಡುವೆ ಭತ್ತದ ನಾಟಿ ಕಾರ್ಯ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ನಂದಿನಿ, ಶಾಂಭವಿ ನದಿಗಳು ಗುರುವಾರ ತುಂಬಿ ಹರಿದವು.

ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದ ಸುರಿಬೈಲು-ಖಂಡಿಗ ರಸ್ತೆ ನಡುವಿನ ಕಿರು ಸೇತುವೆಯಡಿ ಅಳವಡಿಸಿದ್ದ ಮೋರಿಯು ಮಳೆಗೆ ಕೊಚ್ಚಿ ಹೋಗಿದೆ. ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ ಪರಿಸರದಲ್ಲಿ ನೇತ್ರಾವತಿ ಉಕ್ಕಿಹರಿದು ತೆಂಗು ಹಾಗೂ ಕಂಗಿನ ತೋಟಗಳು ಜಲಾವೃತವಾಗಿದ್ದವು.

ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಉಂಟಾದ ಜಲಧಾರೆ ಹಳ್ಳ, ಕೊಳ್ಳಗಳಲ್ಲಿ ತುಂಬಿ, ಕೃಷಿ ಪ್ರದೇಶಕ್ಕೆ ನುಗ್ಗುತ್ತಿದೆ. ಹಿರಿಯಡಕ ಪರಿಸರದಲ್ಲಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ಪಾತ್ರದ ಕೆಲವು ಕೃಷಿ ಭೂಮಿ ಜಲಾವೃವಾಗಿವೆ.

ನಂಜನಗೂಡು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದೇಬೂರು ಪಂಪ್ಹೌಸ್ ಮುಳುಗಡೆಯಾಗಿದ್ದು, ನೀರು ಪೂರೈಕೆಯಲ್ಲಿ
ವ್ಯತ್ಯಯವಾಗುವ ಸಾಧ್ಯತೆ ಇದೆ.

ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟಿರುವುದರಿಂದ ಕೊಳ್ಳೇಗಾಲ ತಾಲ್ಲೂಕಿನ ಹಲವು ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ.
ಶಿವಮೊಗ್ಗ ವರದಿ: ಶಿವಮೊಗ್ಗ
ದಲ್ಲಿ 1, ಪುರಲೆಯಲ್ಲಿ 2 ಮನೆಗಳು ಕುಸಿದಿವೆ. ಸಂತ್ರಸ್ತರಿಗೆ ಸರ್ಕಾರದ
ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ಭಾರೀ ಮಳೆಯಿಂದ ಅರಸಾಳು ಗ್ರಾಮದ ಬಟಾಣಿಜೆಡ್ಡು ಬಳಿ ಗುರುವಾರ ರೈಲ್ವೆ ಹಳಿಯ ಮೇಲೆ ಮರ ಬಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ರೈಲ್ವೆ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿದರು. ಇದರಿಂದ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ರೈಲು 2 ತಾಸು ವಿಳಂಬವಾಗಿ ಸಂಚರಿಸಿತು.

ಚನ್ನಪಟ್ಟಣ ವರದಿ: ಭಾರಿ ಮಳೆ, ಗಾಳಿಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಒಂಬತ್ತು ವಿದ್ಯುತ್ ಕಂಬಗಳು ರಸ್ತೆ ಹಾಗೂ ಮನೆ ಮೇಲೆ ಉರುಳಿ ಬಿದ್ದಿವೆ. ಮನೆಯೊಂದರ ಮೇಲೆ ವಿದ್ಯುತ್ ಕಂಬ ಹಾಗೂ ಮರವೊಂದು ಬಿದ್ದಿವೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಅಪಾಯ ತಪ್ಪಿದೆ.

ಮಣ್ಣಲ್ಲಿ ಹೂತು ಹೋದ ಮಾರುತಿ ಆಮ್ನಿ

ಹಾಸನ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಗ್ರಾಮದ ಬಳಿ ಮತ್ತೆ ಭೂಕುಸಿತ ಉಂಟಾಗಿದೆ. ಗುರುವಾರ ಬೆಳಗಿನ ಜಾವ ಮಣ್ಣಿನಡಿ ಮಾರುತಿ ಆಮ್ನಿ ವಾಹನ ಸಿಲುಕಿದ್ದು, ಕಾರಿನಲ್ಲಿದ್ದ ಐವರನ್ನು ರಕ್ಷಿಸಲಾಗಿದೆ. ಒಬ್ಬರಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ಮಧ್ಯಾಹ್ನವೇ ಇಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿದ ವೇಳೆ, ವಾಹನ ಸಂಚಾರ ಸ್ಥಗಿತಗೊಳಿಸಿ, ಮಣ್ಣು ತೆರವು ಮಾಡಲಾಗಿತ್ತು. ಗುರುವಾರ ಬೆಳಗಿನ ಜಾವ ನೂರು ಅಡಿಗೂ ಎತ್ತರದ ಗುಡ್ಡ ಕುಸಿದು ಬಿದ್ದಿದೆ. ರಸ್ತೆಯ ತುಂಬೆಲ್ಲ ಮಣ್ಣು ತುಂಬಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು 10 ಕಿ.ಮೀ. ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಣ್ಣು ತೆರವು ಮಾಡಿ, ಮಧ್ಯಾಹ್ನದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಕರ್ನಾಟಕ– ಗೋವಾ ಸಂಚಾರ ವ್ಯತ್ಯಯ

ಖಾನಾಪುರ (ಬೆಳಗಾವಿ): ಚೋರ್ಲಾ ಘಟ್ಟದಲ್ಲಿ ಭೂ ಕುಸಿತ ಉಂಟಾಗಿ ಕರ್ನಾಟಕ– ಗೋವಾ ನಡುವೆ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.ಉತ್ತರ ಗೋವಾ ಜಿಲ್ಲೆಯ ಕೇರಿ ಎಂಬಲ್ಲಿ ಈ ಭೂ ಕುಸಿತ ಉಂಟಾಗಿದ್ದು, ರಸ್ತೆಯ ಒಂದು ಭಾಗದ ಕೆಳಗಿನ ಮಣ್ಣು ಕುಸಿದಿದೆ. ಘಟನೆಯ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಗೋವಾ ಪೊಲೀಸರು ಭೂ ಕುಸಿತವಾದ ರಸ್ತೆಯ ಅಕ್ಕಪಕ್ಕ ಬ್ಯಾರಿಕೇಡ್ ಅಳವಡಿಸಿದ್ದಾರೆ. ತಾತ್ಕಾಲಿಕವಾಗಿ ರಸ್ತೆಯ ಮತ್ತೊಂದು ಬದಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.