ಹಿಮೋಫಿಲಿಯಾ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವ ಪ್ರೊಟೀನ್ ಕೊರತೆ ಇರುತ್ತದೆ. ಸರ್ಕಾರ ಇವರಿಗೆ ಆರೋಗ್ಯ ಸೇವೆ ಜತೆಗೆ ಆರ್ಥಿಕ ಬೆಂಬಲವನ್ನೂ ನೀಡಬೇಕು
ಡಾ.ಸುರೇಶ್ ಹನಗವಾಡಿ, ಅಧ್ಯಕ್ಷ, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ
ಬಂತು ಹೊಸ ಚುಚ್ಚುಮದ್ದು
ಹಿಮೋಫಿಲಿಯಾದಿಂದ ಬಳಲುತ್ತಿರುವವರಿಗೆಂದೇ ರೋಗ ನಿರೋಧಕ ಚುಚ್ಚುಮದ್ದನ್ನು ಬಿಡುಗಡೆ ಮಾಡಲಾಗಿದೆ. ರಕ್ತಸ್ರಾವ ತಡೆಗಟ್ಟಲು ನಾನ್ ಫ್ಯಾಕ್ಟರ್ ಮಾನೊಕ್ಲೊನೆಲ್ ಪ್ರತಿಕಾಯ ಔಷಧ ಎಮಿಝಮಾಬ್ ಬಳಲಾಗುತ್ತದೆ. ರೋಷೆ ಸಂಸ್ಥೆ ಇದನ್ನು ಅಭಿವೃದ್ದಿಪಡಿಸಿದೆ. ‘200 ರೋಗಿಗಳಿಗೆ ಇದನ್ನು ಪ್ರಾಯೋಗಿಕ ಬಳಕೆ ಮಾಡಲಾಗಿದ್ದು, ಒಂದು ವರ್ಷದಲ್ಲಿ ಶೂನ್ಯ ರಕ್ತಸ್ರಾವದೊಂದಿಗೆ ಉತ್ತಮ ಫಲಿತಾಂಶವೂ ಬಂದಿದೆ. ತಾಂತ್ರಿಕ ಸಮಿತಿಯ ಶಿಫಾರಸಿನ ಮೇರೆಗೆ ಇದನ್ನು ರಾಜ್ಯದಾದ್ಯಂತ ವಿಸ್ತರಣೆ ಮಾಡಲಾಗುತ್ತದೆ. ಇದರಿಂದ ರಕ್ತ ಸೋರಿಕೆ ತಗ್ಗಿ ಚಿಕಿತ್ಸೆ ಪ್ರಮಾಣವೂ ಕಡಿಮೆಯಾಗಲಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.