ಬೆಂಗಳೂರು: ಮಳೆ ಮತ್ತು ಪ್ರವಾಹದಿಂದ ನಲುಗಿರುವ ಹಿಮಾಚಲ ಪ್ರದೇಶ ರಾಜ್ಯದ ಪ್ರಕೃತಿ ವಿಕೋಪ ನಿಧಿಗೆ ಕರ್ನಾಟಕ ಸರ್ಕಾರ ₹5 ಕೋಟಿ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು ₹5 ಕೋಟಿ ಪರಿಹಾರ ಘೋಷಿಸುವ ನಾಡವಿರೋಧಿ ಕಾಂಗ್ರೆಸ್ ಸರ್ಕಾರ, ರಾಜ್ಯದ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ ಎಂದು ಕಿಡಿಕಾರಿದೆ.

ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಇದು ನ್ಯಾಯವೇ ಸಿದ್ದರಾಮಯ್ಯ. ಕೇರಳ ಆನೆ ದುರಂತಕ್ಕೆ ₹15 ಲಕ್ಷ, ವಯನಾಡಿಗೆ ₹10 ಕೋಟಿ ಹಾಗೂ ದೂರದ ಹಿಮಾಚಲ ಪ್ರದೇಶದ ನೆರೆಗೆ ಮಿಡಿದು 5 ಕೋಟಿ ಪರಿಹಾರ ಘೋಷಿಸುವ ನಾಡವಿರೋಧಿ ಕಾಂಗ್ರೆಸ್ ಸರ್ಕಾರ, ರಾಜ್ಯದ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದ್ರೋಹ ಬಗೆದಿದೆ. ಸಿದ್ದರಾಮಯ್ಯನವರೇ, ತಮ್ಮ ಮಾನವೀಯತೆ ಹೈಕಮಾಂಡ್ ಮೆಚ್ಚಿಸಲಾ? ಅಥವಾ ಕುರ್ಚಿ ಉಳಿಸಿಕೊಳ್ಳುವುದಕ್ಕಾ ಎಂದು ಪ್ರಶ್ನಿಸಿದೆ.

ಕೂಡಲೇ ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಹಾಗೇ ಹಾಸನದ ಅಮಾಯಕ ಮಕ್ಕಳ ಮೃತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿ ಎಂದೂ ಆಗ್ರಹಿಸಿದೆ.
.ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ₹5 ಕೋಟಿ ನೆರವು: ಮುಖ್ಯಮಂತ್ರಿ ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.