ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಯ್ಸಳ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 22ಕ್ಕೆ

Last Updated 14 ಸೆಪ್ಟೆಂಬರ್ 2022, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲ ಸಂಪ್ರದಾಯ, ಸಾಹಿತ್ಯ ಪ್ರಕಾರಗಳಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿರುವ ಲೇಖಕರು, ಬರಹಗಾರರನ್ನು ಒಂದೆ ವೇದಿಕೆಗೆ ತರಲು ಅಕ್ಟೋಬರ್ 22 ಮತ್ತು 23 ರಂದು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಹೊಯ್ಸಳ ಸಾಹಿತ್ಯೋತ್ಸವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹಿರಿಯ ಸಾಹಿತಿ, ಸಂಘಟನಾ ಸಮಿತಿಯ ಅಧ್ಯಕ್ಷಎಚ್. ಎಸ್. ವೆಂಕಟೇಶಮೂರ್ತಿ ತಿಳಿಸಿದರು.

‘ಸಾಹಿತಿಗಳು ಯಾವುದೇ ಪ್ರಕಾರದಲ್ಲಿ ಬರೆದರೂ ಸಾಹಿತಿಗಳ ಮಧ್ಯೆ ಪರಸ್ಪರ ಒಡನಾಟ ಇರಬೇಕು. ನವ್ಯ, ನವ್ಯೋತ್ತರ, ಬಂಡಾಯ, ದಲಿತ ಸಾಹಿತ್ಯ ಮುಂತಾದ ವಿಭಜನೆಗ ಳಿಲ್ಲದೆ ಸಾಹಿತಿಗಳೆಲ್ಲರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದ ಸಂಯೋಜಕ ಬಿ. ಆರ್. ಲಕ್ಷ್ಮಣರಾವ್ ಮಾತನಾಡಿ, ‘ಹೊಸ ಮತ್ತು ಹಳೆಯ ತಲೆಮಾರಿನ ಬರಹಗಾರರು ಈ ಸಾಹಿತ್ಯೋತ್ಸವದಲ್ಲಿ ಒಂದಡೆ ಸೇರಲಿದ್ದು, ಸಾಹಿತ್ಯದ ಗಂಭೀರ ಚರ್ಚೆಗಳು ನಡೆಯಲಿವೆ. ಸಾಹಿತ್ಯದ ಯಾವುದೇ ಚಳವಳಿಯಲ್ಲಿ ಇಲ್ಲದಿರುವ ಕಾಲದಲ್ಲಿ ಹೊಸ ತಲೆಮಾರಿನ ಬರಹಗಾರರಿಗೆ ಹಳೆ ತಲೆಮಾರಿನ ಲೇಖಕರು ಹೊಸ ಮಾರ್ಗ ತೋರಿಸಬಹುದು ಎಂಬ ನಿರೀಕ್ಷೆ ಇದೆ’ ಎಂದರು.

ಕಾರ್ಯಕ್ರಮವನ್ನು ಸಾಹಿತಿ ಎಸ್. ಎಲ್ ಭೈರಪ್ಪ ಉದ್ಘಾಟಿಸಲಿದ್ದಾರೆ. ಕೇಂದ್ರ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾದಂಬರಿ, ವಿಮರ್ಶೆ, ಕವಿಗೋಷ್ಠಿ, ನೆನಪಿನ ಚಿತ್ರಶಾಲೆ, ಸಾಹಿತ್ಯದ ಪೂರ್ವಾಪರ ಮುಂತಾದವುಗಳ ಬಗ್ಗೆ ಯಾವುದೇ ಇಸಂಗೆ ಒಳಪಡದೆ ಮುಕ್ತ ಚರ್ಚೆ ನಡೆಯಲಿದೆ’ ಎಂದು ಅವರು ವಿವರಿಸಿದರು.

ಸಾಹಿತ್ಯೋತ್ಸವದಲ್ಲಿ 100 ಜನ ಆಹ್ವಾನಿತ ಬರಹಗಾರರು, 400 ಜನ ನೋಂದಾಯಿತ ಪ್ರತಿನಿಧಿಗಳಿಗೆ ಒಟ್ಟು 500ಜನಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ನೋಂದಣಿ ಶುಲ್ಕ ₹250 ಇದ್ದು, ಊಟ ಮತ್ತು ವಸತಿ ವ್ಯವಸ್ಥೆಯಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಸಾಹಿತ್ಯೋತ್ಸವ ಸಮಿತಿಯ ಕಾರ್ಯದರ್ಶಿ ಡಾ. ಎಚ್. ಎಲ್. ಮಲ್ಲೇಶಗೌಡ 9448793177, ಹಾಸನ ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಬೊಮ್ಮೇಗೌಡ 9108847480 ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT