ಹುಬ್ಬಳ್ಳಿ: ನಗರದಲ್ಲಿ ನಡೆದ ಗಲಭೆಯಲ್ಲಿ ಬಂಧನಕ್ಕೊಳಗಾದವರು ಅಮಾಯಕರು ಎಂಬುದು ತನಿಖೆಗೆ ಮುಂಚೆಯೇ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹೇಗೆ ಗೊತ್ತು? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡಿಜಿಪಿ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ. ಅದಕ್ಕೂ ಮುಂಚೆಯೇ ಬಂಧಿತರು ಅಮಾಯಕರು ಎಂದು ಹೇಗೆ ಹೇಳುವಿರಿ? ಪೊಲೀಸರು ಮತ್ತು ನ್ಯಾಯಾಂಗವಿದ್ದು, ನಿಜವಾಗಿಯೂ ಅಮಾಯಕರಿದ್ದರೆ ಬಿಡುವುದಾಗಿ ಪೊಲೀಸರೇ ಹೇಳಿದ್ದಾರೆ. ಘಟನೆಯ ಹಿಂದೆ ಯಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳು ಇದ್ದರೂ ಬಿಡುವುದಿಲ್ಲ ಎಂದರು.

ಎಸ್ ಡಿಪಿಐ ಮತ್ತು ಪಿಎಫ್ಐ ಬಗ್ಗೆ ಕೆಲವು ಪ್ರಕ್ರಿಯೆಗಳು ನಡಿತಿವೆ. ಅವು ರಾಜಕೀಯ ಸಂಘಟನಗಳು ಇರೋದ್ರಿಂದ ಅದನ್ನ ಸರ್ಕಾರಕ್ಕೆ ಹೇಳಿದ್ದೇವೆ. ಗುಂಡಾಗಳ ಆಸ್ತಿ ಪಾಸ್ತಿ ಜಪ್ತಿ ವಿಚಾರವನ್ನು ಎಲ್ಲಾ ಕಡೆಗಳಲ್ಲಿ ಮಾಡೋಕ್ಕಾಗಲ್ಲ. ಇರೋ ಕಾನೂನನ್ನೇ ಕಟ್ಟುನಿಟ್ಟಾಗಿ ಬಳಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.