ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ: ಗಣಿ ಕಾರ್ಮಿಕರಿಗಿಲ್ಲ ಉತ್ಪಾದನಾ ಪ್ರೋತ್ಸಾಹ ಧನ

ಗುರಿ ತಲುಪದ ಉತ್ಪಾದನೆ: 3 ವರ್ಷದಿಂದ ದೊರಕದ ಪಿಎಲ್ಐಬಿ
Published 22 ಏಪ್ರಿಲ್ 2024, 20:48 IST
Last Updated 22 ಏಪ್ರಿಲ್ 2024, 20:48 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಇಲ್ಲಿನ ಚಿನ್ನದ ಗಣಿ ಆಡಳಿತ ಮಂಡಳಿಯೊಂದಿಗೆ ಕಾರ್ಮಿಕ ಸಂಘ ಮಾಡಿಕೊಂಡಿರುವ ಒಪ್ಪಂದಂತೆ 1,580 ಕೆ.ಜಿ ಚಿನ್ನ ಉತ್ಪಾದನೆಯ ಗುರಿ ತಲುಪದೆ ಇರುವುದರಿಂದ ಈ ಬಾರಿಯೂ ಉತ್ಪಾದನಾ ಪ್ರೋತ್ಸಾಹ ಧನದಿಂದ (ಪಿಎಲ್‌ಐಬಿ) ವಂಚಿತರಾಗುವ ಆತಂಕ ಕಾರ್ಮಿಕರನ್ನು ಕಾಡುತ್ತಿದೆ.

2023–24ನೇ ಆರ್ಥಿಕ ವರ್ಷದಲ್ಲಿ 1,553 ಕೆ.ಜಿ ಚಿನ್ನ ಉತ್ಪಾದನೆಯಾಗಿದೆ. ಒಪ್ಪಂದದ ಪ್ರಕಾರ ಚಿನ್ನ ಉತ್ಪಾದನೆ ಗುರಿ ತಲುಪದ ಕಾರಣ ಪಿಎಲ್ಐಬಿ ಸಿಗುವುದು ಕಷ್ಟ. 2020–21ನೇ ಸಾಲಿನಲ್ಲಿ 1,115 ಕೆ.ಜಿ, 2021–22ನೇ ಸಾಲಿನಲ್ಲಿ 1,238 ಕೆ.ಜಿ, 2022–23ನೇ ಸಾಲಿನಲ್ಲಿ 1,411 ಕೆ.ಜಿ. ಚಿನ್ನ ಉತ್ಪಾದನೆಯಾದ ಕಾರಣ ಕಳೆದ ಮೂರು ಆರ್ಥಿಕ ವರ್ಷಗಳಿಂದ ಕಾರ್ಮಿಕರಿಗೆ ಪಿಎಲ್ಐಬಿ ನೀಡಿಲ್ಲ.

ಪಿಎಲ್ಐಬಿ ಕುರಿತು 2018–19ನೇ ಸಾಲಿನಲ್ಲಿ ಒಪ್ಪಂದ ಮಾಡಿಕೊಳ್ಳುವ ಮೊದಲು, ಗಣಿ ಕಂಪನಿ ಗಳಿಸಿದ ಲಾಭಾಂಶದ ಆಧಾರದ ಮೇಲೆ ಉತ್ಪಾದನಾ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಒಪ್ಪಂದದ ನಂತರ ಪಿಎಲ್ಐಬಿ ಪಡೆಯುವುದು ಕಷ್ಟವಾಗಿದೆ ಎನ್ನುತ್ತಾರೆ ಕಾರ್ಮಿಕರು.

‘ಚಿನ್ನ ಉತ್ಪಾದನೆ ಬದಲಿಗೆ ಅದಿರು ಉತ್ಪಾದನೆ ಆಧಾರದಲ್ಲಿ ಪಿಎಲ್ಐಬಿ ನೀಡಬೇಕು ಎಂದು ಗಣಿ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದೇವೆ. ವ್ಯವಸ್ಥಾಪಕ ನಿರ್ದೇಶಕರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿರ್ದೇಶಕರ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ (ಎಐಟಿಯುಸಿ) ಅಧ್ಯಕ್ಷ ಎಸ್.ಎಂ. ಶಫಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT