ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈಮಾನಿಕ ತರಬೇತಿಗೆ ಡಿಮೊನಾ ಸಿಮ್ಯುಲೇಟರ್‌

Published : 4 ಸೆಪ್ಟೆಂಬರ್ 2024, 0:28 IST
Last Updated : 4 ಸೆಪ್ಟೆಂಬರ್ 2024, 0:28 IST
ಫಾಲೋ ಮಾಡಿ
Comments

ಬೆಂಗಳೂರು: ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಕೆಡೆಟ್‌ಗಳಿಗೆ ವೈಮಾನಿಕ ಹಾರಾಟದ ತರಬೇತಿ ನೀಡುವ ಉದ್ದೇಶದಿಂದ ಸೂಪರ್‌ ಡಿಮೊನಾ ವಿಮಾನದ ಸಿಮ್ಯುಲೇಟರ್‌ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ಬೆಂಗಳೂರಿನಲ್ಲಿರುವ ಭಾರತೀಯ ವಾಯುಪಡೆಯ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆ (ಎಸ್‌ಡಿಐ) ಸಿಮ್ಯುಲೇಟರ್‌ನ ವಿನ್ಯಾಸ, ಅಭಿವೃದ್ಧಿ ಮತ್ತು ಜೋಡಣೆ ಮಾಡಿ ಹಸ್ತಾಂತರಿಸಿದೆ.

ಎನ್‌ಡಿಎನ್‌ನಲ್ಲಿ ವಾಯುಪಡೆ ತರಬೇತಿ ತಂಡವನ್ನು (ಎಎಫ್‌ಟಿಟಿ) ಸ್ಥಾಪಿಸಲಾಗಿದ್ದು, ಈ ಸಿಮ್ಯುಲೇಟರ್‌ ಮೂಲಕ ಕೆಡೆಟ್‌ಗಳಿಗೆ ಹಾರಾಟದ ತರಬೇತಿ ನೀಡಲಾಗುವುದು. ಕೆಡೆಟ್‌ಗಳು ವೈಮಾನಿಕ ಹಾರಾಟದ ಮೂಲಭೂತ ಅಂಶಗಳನ್ನು ತಿಳಿದುಕೊಂಡಿರಬೇಕು. ವಿಮಾನ ಹಾರಾಟದ ವ್ಯವಸ್ಥೆಯ ಕುರಿತು ಅಗತ್ಯ ಪ್ರಾಥಮಿಕ ಜ್ಞಾನ ನೀಡುವ ಮೂಲಕ ಅವರನ್ನು ಸಜ್ಜುಗೊಳಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.

ಸಿಮ್ಯುಲೇಷನ್‌ ಸಾಫ್ಟ್‌ವೇರ್‌ ಅಲ್ಲದೇ, ವಿಮಾನದ ಡೈನಾಮಿಕ್ಸ್‌ಗಳ ಸಾಫ್ಟ್‌ವೇರ್‌ ಅನ್ನು ವಾಯುಪಡೆಯ ಎಂಜಿನಿಯರ್‌ಗಳೇ ಅಭಿವೃದ್ಧಿಪಡಿಸಿದ್ದಾರೆ. ಅತ್ಯಾಧುನಿಕ 135 ಡಿಗ್ರಿ ಎಫ್‌ಒವಿ ಇಮ್ಮರ್ಸಿವ್‌ ಡಿಸ್ಪ್ಲೇ ವ್ಯವಸ್ಥೆಯೂ ಇರುವುದರಿಂದ ಕೆಡೆಟ್‌ಗಳಿಗೆ ವೈಮಾನಿಕ ಹಾರಾಟದ ವಿಸ್ತೃತ ದೃಶ್ಯದ ಅನುಭವವನ್ನೂ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತದ ಯೋಜನೆಯ ಭಾಗವಾಗಿ ಸ್ಥಳೀಯ ಉದ್ಯಮಗಳನ್ನೂ ತೊಡಗಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT