ಐಸಿಎಸ್‌ಇ 10ನೇ ತರಗತಿ ಉತ್ತೀರ್ಣ ಪ್ರಮಾಣ ಶೇ 99.83. ಪರೀಕ್ಷೆಗೆ ಹಾಜರಾದ ಒಟ್ಟು 27,826 ವಿದ್ಯಾರ್ಥಿಗಳಲ್ಲಿ 27,779 ಮಂದಿ ಉತ್ತೀರ್ಣರಾಗಿದ್ದು, 47 ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ರಾಜ್ಯದ ಹಲವು ಶಾಲೆಗಳ ಫಲಿತಾಂಶ ಶೇ 100ರಷ್ಟಿದೆ. ಅವುಗಳಲ್ಲಿ ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್, ಸ್ವಾಮಿ ವಿವೇಕಾನಂದ ಸ್ಕೂಲ್, ಗ್ರೀನ್‌ವುಡ್ ಹೈಸ್ಕೂಲ್ ಪ್ರಮುಖವಾದವು.