ಬೆಂಗಳೂರು: ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಕ್ರಿಯವಾಗಿರುವ ದರೋಡೆ ಹಾಗೂ ಸುಲಿಗೆ ತಂಡಗಳು ನೂರಾರು ಪ್ರಯಾಣಿಕರಿಂದ ಹಣ, ಚಿನ್ನಾಭರಣ ದೋಚುತ್ತಿವೆ.

ವೇಗವಾಗಿ ಬರುವ ವಾಹನಗಳನ್ನು ಗುರಿಯಾಗಿಸಿ, ಹೆದ್ದಾರಿ ಮಧ್ಯದಲ್ಲಿಯೇ ಕಲ್ಲುಗಳನ್ನು ಜೋಡಿಸಿಟ್ಟು ಅಪಘಾತಕ್ಕೀಡು ಮಾಡಿ ಬೆಲೆಬಾಳುವ ವಸ್ತುಗಳನ್ನು ದೋಚುವ ಘಟನೆಗಳು ನಡೆಯುತ್ತಿವೆ. ಕಳೆದ ಮೂರು ವರ್ಷಗಳಲ್ಲಿ 430 ದರೋಡೆ, ಸುಲಿಗೆ ಪ್ರಕರಣಗಳು ನಡೆದಿವೆ.

ಸುಲಿಗೆಕೋರರು ವಾಹನಗಳನ್ನು ಅಪಘಾತಕ್ಕೀಡು ಮಾಡುತ್ತಾರೆ. ಇಲ್ಲವೇ ರಾತ್ರಿ ವೇಳೆ ಹೆದ್ದಾರಿಗಳ ಆಯ್ದ ಕಡೆಗಳಲ್ಲಿ ಮೊಳೆಗಳನ್ನು ಎಸೆದು ವಾಹನಗಳ ಚಕ್ರ ಪಂಕ್ಚರ್ ಮಾಡಿಸಿ ಕೃತ್ಯ ಎಸಗುತ್ತಿದ್ದಾರೆ.

ವಾಹನಗಳ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಕೃತ್ಯಗಳು ಸೆರೆಯಾಗುತ್ತಿವೆ. ಈ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರೂ ಕೃತ್ಯ ಎಸಗಿದವರ ಸುಳಿವು ದೊರೆಯುತ್ತಿಲ್ಲ.

‘ಹೆದ್ದಾರಿಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಪ್ರಕರಣಗಳು ನಡೆದಿವೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಸಾಧ್ಯವಾಗಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೆದ್ದಾರಿ ಬದಿಯಲ್ಲಿಯೇ ಹೊಂಚು: ಬೆಂಗಳೂರು–ಚೆನ್ನೈ ‘ಎಕ್ಸ್ಪ್ರೆಸ್ ವೇ’ನಲ್ಲಿ ದರೋಡೆಕೋರರು ಹೆಚ್ಚು ಸಕ್ರಿಯ ಆಗಿದ್ದಾರೆ ಎಂದು ವಾಹನ ಚಾಲಕರು, ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ದರೋಡೆಕೋರರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಕೀಲ ಹುಸೇನ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು. ಆದರೂ, ಹೆದ್ದಾರಿಗಳಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ನಿರಾತಂಕವಾಗಿ ಕೃತ್ಯ ಎಸಗುತ್ತಿದ್ದಾರೆ ಎಂಬ ಆರೋಪವಿದೆ.

ಹಾವೇರಿ–ಮೊಳಕಾಲ್ಮುರು, ಬಂಗಾರಪೇಟೆ–ಬಾಗೇಪಲ್ಲಿ, ದೇವಸಗೂರು–ರಾಯಚೂರು–ಕಟಗೋಡು, ತುಮಕೂರು –ಶಿವಮೊಗ್ಗ–ಹೊನ್ನಾವರದ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ದರೋಡೆಕೋರರ ತಂಡಗಳು ಹೆಚ್ಚಾಗಿ ಕೃತ್ಯ ಎಸಗಿವೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು–ಪುಣೆ, ಬೆಂಗಳೂರು–ಹಾಸನ –ಮಂಗಳೂರು, ಬೆಂಗಳೂರು–ಮೈಸೂರು ಎಕ್ಸ್ಪ್ರೆಸ್ ವೇ, ಮಂಗಳೂರು– ಉಡುಪಿ–ಕಾರವಾರ, ಕುಣಿಗಲ್–ಮೈಸೂರು, ರಾಮನಗರ–ಕನಕಪುರ ಮಾರ್ಗವಾಗಿ ತಮಿಳುನಾಡಿನ ಕೊಯಮತ್ತೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಚಾಲಕರು ಹಾಗೂ ಪ್ರಯಾಣಿಕರಿಂದ ಹಣ ದೋಚಲಾಗುತ್ತಿದೆ. ಬೇರೆ ಸ್ಥಳಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ವಾಹನಗಳಲ್ಲಿ ತೆರಳುತ್ತಿದ್ದವರು ಆಭರಣ ಕಳೆದುಕೊಳ್ಳುತ್ತಿದ್ದಾರೆ. ಹಲ್ಲೆಗೂ ಒಳಗಾಗಿದ್ದಾರೆ.

‘ಬೆಂಗಳೂರು–ಚೆನ್ನೈ ‘ಎಕ್ಸ್ಪ್ರೆಸ್ ವೇ’ನ ಕೆಜಿಎಫ್ ಬಳಿ ಕಲ್ಲು, ಕಬ್ಬಿಣದ ರಾಡುಗಳನ್ನಿಟ್ಟು ದುಷ್ಕರ್ಮಿಗಳು ಅಪಘಾತ ಮಾಡುತ್ತಾರೆ. ಬಳಿಕ, ದರೋಡೆ ನಡೆಸುತ್ತಾರೆ. ಅಪಘಾತದಿಂದ ಚಾಲಕರು ಹಾಗೂ ಪ್ರಯಾಣಿಕರು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಹೆದ್ದಾರಿಗಳಲ್ಲಿ ತಕ್ಷಣಕ್ಕೆ ಯಾರೂ ನೆರವಿಗೂ ಬರುವುದಿಲ್ಲ’ ಎಂದು ಹುಸೇನ್ ಆತಂಕ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳು, ವಾಹನಗಳನ್ನು ತಡೆದು ತಪಾಸಣೆ ಮಾಡುವ ವ್ಯವಸ್ಥೆ ಇಲ್ಲ. ವಿದ್ಯುತ್ ದೀಪಗಳನ್ನು ಹೆದ್ದಾರಿ ಪ್ರಾಧಿಕಾರದವರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಚಾಲಕ ಮಹೇಶ್ ಆರೋಪಿಸಿದರು.

ರಾತ್ರಿ 10ರ ಬಳಿಕ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ವೇಗದ ಕಾರಣಕ್ಕೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಆದರೆ ಇತ್ತೀಚೆಗೆ ದರೋಡೆಯ ಕೃತ್ಯಗಳು ನಡೆದಿಲ್ಲ
ಅನೂಪ್ ಶೆಟ್ಟಿ ಡಿಸಿಪಿ ಪಶ್ಚಿಮ ಸಂಚಾರ ವಿಭಾಗ

‘ಎಂಒಬಿ ಕಾರ್ಡ್ಗೆ ಹೆಸರು ಸೇರ್ಪಡೆ’

‘2023ರಲ್ಲಿ 160 2024ರಲ್ಲಿ 139 ಹಾಗೂ 2025ರಲ್ಲಿ 131 ಪ್ರಕರಣಗಳು ನಡೆದಿವೆ. ಹೆದ್ದಾರಿಗಳಲ್ಲಿ ಗಸ್ತು ನಡೆಸಲು ಪ್ರತಿ ಠಾಣೆಗೂ ದ್ವಿಚಕ್ರ ವಾಹನ ವಿತರಿಸಲಾಗಿದೆ. ದರೋಡೆಕೋರರ ಕೃತ್ಯ ತಡೆಗಟ್ಟಲು ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ 112 ಇಆರ್ಎಸ್ಎಸ್ ಗಸ್ತು (ಪೆಟ್ರೋಲಿಂಗ್) ನಿಯೋಜಿಸಲಾಗಿದೆ. ಕೃತದಲ್ಲಿ ಭಾಗಿ ಆದವರ ವಿರುದ್ಧ ಎಂಒಬಿ ಕಾರ್ಡ್(ಅಪರಾಧ ಹಿನ್ನೆಲೆಯುಳ್ಳವ) ತೆಗೆಯಲಾಗುತ್ತಿದೆ. ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಸಿಬ್ಬಂದಿಗೆ ಎಂಸಿಸಿಟಿಎನ್ಎಸ್ ಮೊಬೈಲ್ ಅಪ್ಲಿಕೇಶನ್ ಬಳಸಲು ಸೂಚಿಸಲಾಗಿದೆ’ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.