ಬೆಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಕೆಲವು ಸಮುದಾಯವರು ತಾವು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದ್ದು, ಆದಿಕರ್ನಾಟಕ (ಎಕೆ), ಆದಿದ್ರಾವಿಡ (ಎಡಿ), ಆದಿಆಂಧ್ರ (ಎಎ) ಹೆಸರಿನಲ್ಲಿ ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ’ ಎಂದು ಮಾಜಿ ಸಚಿವರೂ ಆಗಿರುವ ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯು ಭಾನುವಾರ ಆಯೋಜಿಸಿದ್ದ ‘ಜಾತಿ ಜನಗಣತಿ ವೇಳೆ ಮಾದಿಗರ ಪಾತ್ರವೇನು?’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಂಧ್ರದಲ್ಲಿ ಮಂದಕೃಷ್ಣ ಆರಂಭಿಸಿದ ಮಾದಿಗ ಒಳಮೀಸಲಾತಿ ಹೋರಾಟ ಕರ್ನಾಟಕದಲ್ಲಿಯೂ ಕಿಚ್ಚು ಹಚ್ಚಿತು’ ಎಂದರು.

‘ತೆಲಂಗಾಣ ಸೇರಿ ಕೆಲವೆಡೆ ಒಳಮೀಸಲಾತಿ ಜಾರಿಗೆ ಅಲ್ಲಿನ ಸರ್ಕಾರಗಳು ಕ್ರಮಕೈಗೊಂಡಿವೆ. ಕರ್ನಾಟಕದಲ್ಲಿಯೂ ಒಳಮೀಸಲಾತಿ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಕ್ರಮಕೈಗೊಂಡಿದ್ದಾರೆ. ಒಳ ಮೀಸಲಾತಿ ಜಾರಿಗೆ ಬರುವವರೆಗೆ ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಸರ್ಕಾರ ತಡೆ ನೀಡಿದೆ’ ಎಂದರು.

‘ಪರಿಶಿಷ್ಟ ಕುಟುಂಬಗಳ ದತ್ತಾಂಶ ಸಂಗ್ರಹಕ್ಕೆ ಮೇ 5ರಿಂದ 17ರವರೆಗೆ ಜಾತಿ ಜನಗಣತಿ ನಡೆಯಲಿದೆ. ಈ ಅವಧಿಯಲ್ಲಿ ಮಾದಿಗ ಸಮುದಾಯದವರು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಮಾದಿಗ ಸಮುದಾಯ ಜಾತಿ, ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ಮುಳುಗುವ ಮುಗ್ದ ಸಮುದಾಯ. ಇಂತಹ ಆಚರಣೆಗಳನ್ನು ಜಾತಿ ಜನಗಣತಿ ಮುಗಿಯುವವರೆಗೂ ಆಚರಿಸಬಾರದು. ನಮ್ಮ ಗುರಿ ಜಾತಿ ಜನಗಣತಿಯತ್ತ ಇರಬೇಕು’ ಎಂದು ಮನವಿ ಮಾಡಿದರು.

‘ಜಾತಿ ಜನಗಣತಿ ಕಾರ್ಯ ಪೂರ್ಣಗೊಂಡು ಒಳ ಮೀಸಲಾತಿ ಜಾರಿಗೊಳ್ಳುವವರೆಗೂ ಕಾಲೊನಿ, ಹಟ್ಟಿ, ಬಡಾವಣೆಗಳ ನಮ್ಮ ನಮ್ಮ ಮನೆಗಳಲ್ಲಿದ್ದು, ಗಣತಿದಾರರ ಜೊತೆ ಬಡಾವಣೆ ಸುತ್ತಬೇಕು. ಮಾದಿಗ ಎಂದು ಕಡ್ಡಾಯವಾಗಿ ಬರೆಸುವಂತೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು. ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಎಂಬ ಸೂಚಕವನ್ನು ಯಾವುದೇ ಕಾರಣಕ್ಕೂ ಬರೆಸಲೇಬಾರದು. ಸಮುದಾಯದ ಯಾರೊಬ್ಬರೂ ಗಣತಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು’ ಎಂದರು.

‘ಆಂಧ್ರದಲ್ಲಿ ಮಾದಿಗ ಸಮುದಾಯ ಆಯೋಜಿಸಿದ್ದ ಒಳಮೀಸಲಾತಿ ಹೋರಾಟದಲ್ಲಿ ಸಚಿವ ಸ್ಥಾನ ಪಣಕ್ಕಿಟ್ಟು ಈ ಹಿಂದೆ ನಾನು ಭಾಗವಹಿಸಿದ್ದೆ. ನನಗೆ ಮಾದಿಗ ಸಮುದಾಯದ ಪ್ರಗತಿ ಮುಖ್ಯ’ ಎಂದರು.

ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಶಾಸಕ ಬಸವಂತಪ್ಪ ಮತ್ತು ಮಾದಿಗ ಸಮುದಾಯದ ಮುಖಂಡರು ಇದ್ದರು.

ರಾಜ್ಯದಲ್ಲಿ ಒಳಮೀಸಲಾತಿ ಹಂಚಿಕೆ ವೇಳೆ ಮಾದಿಗ ಸಮುದಾಯಕ್ಕೆ ಹೆಚ್ಚು ಪಾಲು ದೊರೆಯಲೇಬೇಕು. ಅದಕ್ಕೆ ಸಮುದಾಯದ ಎಲ್ಲರೂ ಬಹಳ ಎಚ್ಚರಿಕೆ ಹೆಜ್ಜೆ ಇಡಬೇಕು.
–ಎಚ್. ಆಂಜನೇಯ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.